ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ಪೊಲೀಸ್ ಇಲಾಖೆ ಸುಳ್ಯ, ಸುದ್ದಿ ಸಮೂಹ ಸಂಸ್ಥೆ ಸುಳ್ಯ, ವಿವೇಕಾನಂದ ವಿದ್ಯಾಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಡ್ಕಾರು ವಿನೋಬಾನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಮತ್ತು ಯುವ ಸಪ್ತಾಹ ಕಾರ್ಯಕ್ರಮವು ಇಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ್ ಸೋಮಶೇಖರ್ ಎ. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ, ಸ್ವಾಮಿ ವಿವೇಕನಂದರ ಜೀವನ ತತ್ತ್ವದ ಕುರಿತು ಮಾಹಿತಿ ನೀಡಿ, ದೇಶದ ಕೀರ್ತಿಯನ್ನು ವಿದೇಶದಲ್ಲಿ ಎತ್ತಿ ಹಿಡಿದ ಒಬ್ಬ ಶ್ರೇಷ್ಟ ನಾಯಕ ಸ್ವಾಮಿ ವಿವೇಕಾನಂದರಾಗಿದ್ದು, ಜೀವನದಲ್ಲಿ ಅವರ ಆದರ್ಶ, ತತ್ತ್ವಗಳನ್ನು ಅನುಸರಿಸಿ ಬಾಬಾ ಸಾಹೇಬ್ ಅಂಬೇಡ್ಕರ್ರವರ ಸಂವಿಧಾನವನ್ನು ಗೌರವಿಸಿ ಉತ್ತಮ ಪ್ರಜೆಯಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಬೆಳೆಯಬೇಕು ಎಂದು ಹೇಳಿದರು.
ಯುವ ಸಪ್ತಾಹದ ಅಂಗವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುಳ್ಯ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಬಿ. ಜನಾರ್ದನ್, ಸ್ವಾಮಿ ವಿವೇಕಾನಂದರ ಜೀವನ ತತ್ತ್ವದ ಬಗ್ಗೆ ವಿಷಯ ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಸುಧಾಕರ ಕಾಮತ್ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಹೇಮಂತ್ ಕಾಮತ್, ಪೊಲೀಸ್ ಹೆಡ್ ಕಾನ್ಸ್ಟೇಬಲ್ ಎಸ್.ಸತೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಸರಸ್ವತಿ ಗೀತೆ ಹಾಡಿದರು. ವಿವೇಕಾನಂದ ಆಂಗ್ಲಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯ ಗಿರೀಶ್ಕುಮಾರ್ ಎ. ಸ್ವಾಗತಿಸಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಜಯಪ್ರಸಾದ್ ವಂದಿಸಿದರು. ಶಿಕ್ಷಕಿ ಅನನ್ಯ ಕೆ., ದಿವ್ಯ ಬಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೋರ್ಟ್ ಸಿಬ್ಬಂದಿಗಳಾದ ರಕ್ಷಿತಾ, ಲಾವಣ್ಯ, ಶಾಲಾ ಶಿಕ್ಷಕ ವೃಂದದವರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.