ವಿನ್ನರ್ಸ್:ಯಂಗ್ ಫ್ರೆಂಡ್ಸ್ ಸರಳಿಕುಂಜ, ರನ್ನರ್ಸ್:ರಾಯಲ್ ಸ್ಟ್ರೈಕೆರ್ಸ್ ಪಾಲಡ್ಕ
ಸುಳ್ಯದ ಕೊಡಿಯಾಲಬೈಲು ಡಿಗ್ರಿ ಕಾಲೇಜು ಮೈದಾನದಲ್ಲಿ ಬಲಿಷ್ಠ ತಂಡಗಳ ಅರಂಬೂರು ಪ್ರೀಮಿಯರ್ ಲೀಗ್-ಸೀಸನ್ -8 ನಡೆಯಿತು.
ಪಂದ್ಯಾಟಕ್ಕೆ ಆನ್ಲೈನ್ ಸ್ಕೋರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಶರೀಫ್, ಕಬೀರ್ ಹಾಗೂ ನದೀಮ್ ಅವರು ನಿರಂತರವಾಗಿ ಆನ್ಲೈನ್ ಸ್ಕೋರರ್ ಆಗಿ ಸಹಕರಿಸಿದರು.
ಸೀಸನ್-8 ವಿನ್ನರ್ಸ್ ಆಗಿ ಯಂಗ್ ಫ್ರೆಂಡ್ಸ್ ಸರಳಿಕುಂಜ ಮತ್ತು
ರನ್ನರ್ಸ್ ತಂಡವಾಗಿ ರಾಯಲ್ ಸ್ಟ್ರೈಕೆರ್ಸ್ ಪಾಲಡ್ಕ ತಂಡವು ಹೊರ ಹೊಮ್ಮಿತು.
ಸಂಜೆಯ ಸಮಾರೋಪ ಸಮಾರಂಭದಲ್ಲಿ ಯುನೈಟೆಡ್ ಅರಂಬೂರು ಕ್ಲಬ್ ಅಧ್ಯಕ್ಷರಾದ ಜಯಪ್ರಕಾಶ್ ಅರಂಬೂರು ಅಧ್ಯಕ್ಷತೆಯನ್ನು ವಹಿಸಿದ್ದರು.
ಕೆವಿಜಿ ಡಿಪ್ಲೊಮಾ ಕಾಲೇಜಿನ ಉಪನ್ಯಾಸಕ ಸುನಿಲ್ ಅರಂಬೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಫಯಾಜ್
ಅರಂಬೂರು, ಕಾರ್ಯದಶಿಗಳಾದ ರಾಜು ಅರಂಬೂರು, ಜೊತೆ ಕಾರ್ಯದರ್ಶಿ ಅನಿಲ್ ಅರಂಬೂರು, ಸಫವಾನ್ ಅರಂಬೂರು ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು. ಅತಿಥಿಗಳು ಪ್ರಶಸ್ತಿ ವಿತರಣೆ ಮಾಡಿದರು. ಮೀಡಿಯಾ ವಿಂಗ್ ಶರೀಫ್ ಪೆರಾಜೆ ಮತ್ತು ನದೀಮ್ ಅರಂಬೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.