ಲಯನ್ಸ್ ಕ್ಲಬ್ ಪಂಜ, ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ದಿ.ಶ್ರೀಮತಿ ಅಮ್ಮಕ್ಕ ಮತ್ತು ದಿ. ಬಿಳಿಮಲೆ ಮರಿಯಣ್ಣ ಗೌಡ ಸ್ಮರಣ “ಲಯನ್ಸ್ ಭವನ” ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜ. 17 ರಂದು ನಡೆಯಿತು.ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಜಾಕೆ ಸಭಾಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತಕುಮಾರ್ ಶೆಟ್ಟಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿ”ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರೀಮತಿ ಯಶೋಧ ಮತ್ತು ಚಿದಾನಂದ ಬಿಳಿಮಲೆಯವರು ನೀಡಿರುವ ಸ್ಥಳದಾನ ಶಾಶ್ವತ ಸೇವೆ. ಅವರ ಸೇವೆಗೆ ಲಯನ್ಸ್ ಕ್ಲಬ್ ಆಭಾರಿಯಾಗಿದೆ. ಎಲ್ಲರ ಸಹಕಾರದೊಂದಿಗೆ ಶ್ರೀಘ್ರವಾಗಿ ಭವನ ಮೂಡಿಬರಲಿ ” ಎಂದು ಹೇಳಿದರು.ಸ್ಥಳದಾನಿ ಶ್ರೀಮತಿ ಯಶೋಧ ಮತ್ತು ಚಿದಾನಂದ ಬಿಳಿಮಲೆ ದೀಪ ಪ್ರಜ್ವಲನೆಗೊಳಿಸಿದರು.
ಲಯನ್ಸ್ ಜಿಲ್ಲಾ ನಿಕಟಪೂರ್ವ ರಾಜ್ಯಪಾಲ ಡಾ. ಗೀತಾ ಪ್ರಕಾಶ್ , ಪ್ರಥಮ ಉಪ ರಾಜ್ಯಪಾಲ ಸಂಜಿತ್ ಶೆಟ್ಟಿ , ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ ಶುಭಾಶಂಸನೆ ಮಾಡಿದರು.
ಪ್ರಾಂತೀಯ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ವಲಯಾಧ್ಯಕ್ಷ ವೆಂಕಪ್ಪ ಕೇನಾಜೆ ಗೌರವ ಉಪಸ್ಥಿತಿ ,ಪಂಜ ಲಯನ್ಸ್ ಚಾರಿಟೇಬಲ್ ಅಧ್ಯಕ್ಷ ಜಾಕೆ ಮಾಧವ ಗೌಡ, ಕಾರ್ಯದರ್ಶಿ ಶಶಿಧರ ಪಳಂಗಾಯ, ಕೋಶಾಧಿಕಾರಿ ತುಕರಾಮ್ ಏನೆಕಲ್ಲು, ಲಯನ್ಸ್ ಕ್ಲಬ್ ನಿಕಟಪೂರ್ವಾಧ್ಯಕ್ಷ ಕುಮಾರಸ್ವಾಮಿ ಕಿನ್ನಿಕುಮೇರಿ,ಕಾರ್ಯದರ್ಶಿ ರಾಜೇಶ್ ರೈ, ಕೋಶಾಧಿಕಾರಿ ಬಾಲೀಶ್ ಪಳಂಗಾಯ ವೇದಿಕೆಯಲ್ಲಿ ಉಪಸ್ಥಿತಿರಿದ್ದರು. ಲಯನ್ಸ್ ಜಿಲ್ಲಾ ವತಿಯಿಂದ ಸ್ಥಳದಾನಿ ಶ್ರೀಮತಿ ಯಶೋಧ ಮತ್ತು ಚಿದಾನಂದ ಬಿಳಿಮಲೆ ಯವರನ್ನು ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಯವರು ಸನ್ಮಾನಿಸಿದರು ಮತ್ತು ಲಯನ್ಸ್ ಜಿಲ್ಲಾ ವತಿಯಿಂದ ನೂತನ ಭವನ ನಿರ್ಮಾಣಕ್ಕೆ ರೂ.50 ಸಾವಿರದ ಚೆಕ್ ನ್ನು ಹಸ್ತಾಂತರಿಸಿದರು. ಇದೇ ವೇಳೆ ಅನೇಕರು ಭವನಕ್ಕೆ ದೇಣಿಗೆ ಚಿಕ್ ಹಸ್ತಾಂತರಿಸಿದರು.ಕಾರ್ಯಕ್ರಮದಲ್ಲಿ ಸುರೇಶ್ ಕುಮಾರ್ ನಡ್ಕ ವೇದಿಕೆಗೆ ಆಹ್ವಾನಿಸಿದರು.ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು. ಸಂತೋಷ್ ಜಾಕೆ ಸ್ವಾಗತಿಸಿದರು.ಕುಮಾರ ಸ್ವಾಮಿ ಕಿನ್ನಿಕುಮೇರಿ ಲಯನ್ಸ್ ಪ್ರಾರ್ಥನೆ ಮಾಡಿದರು.ತುಕರಾಮ್ ಏನೆಕಲ್ಲು ಧ್ವಜ ವಂದನೆ ಮಾಡಿದರು. ಜಾಕೆ ಮಾಧವ ಗೌಡ ರವರು ಪ್ರಾಸ್ತಾವಿಕ ಮಾತನಾಡಿದರು.
ಶಶಿಧರ ಪಳಂಗಾಯ ವಂದಿಸಿದರು.