ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕ್ಲರ್ಕ್ ಆಗಿದ್ದು ಇತ್ತೀಚೆಗೆ ಕಡೆವೆ ಹಾಯ್ದು ಮೃತ ಪಟ್ಟ ಸುಬ್ರಹ್ಮಣ್ಯದ ರಾಮಚಂದ್ರ ಅರ್ಬಿತ್ತಾಯರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ಧನ ನೀಡಲಾಯಿತು. ಇಂದು ಸಚಿವ ಎಸ್ ಅಂಗಾರ ಪರಿಹಾರ ಪತ್ರವನ್ನು ರಾಮಚಂದ್ರ ಅರ್ಬಿತ್ತಾಯರ ಸಹೋದರ ರವೀಂದ್ರ ಅರ್ಬಿತ್ತಾಯರಿಗೆ ಹಸ್ತಾಂತರಿಸಿದರು. ಪರಿಹಾರ ಮೊತ್ತ ಈಗಾಗಲೇ ಅಕೌಂಟಿಗೆ ಜಮೆ ಆಗಿದೆ. ಅರಣ್ಯ ಇಲಾಖೆಯವರ ಪ್ರಮಾಣಿಕ ತನಿಖಾ ವರದಿ ಪರಿಹಾರ ಮೊತ್ತ ಸಿಗುವಲ್ಲಿ ಕೆಲಸ ಮಾಡಿದ್ದಾಗಿ ತಿಳಿದು ಬಂದಿದೆ. ಸುಳ್ಯ ಎ ಸಿ ಎಫ್ ಪ್ರವೀಣ್ ಶೆಟ್ಟಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.