ಮನೆಯ ಸಿಮೆಂಟ್ ಶೀಟ್ನ್ನು ದುರಸ್ಥಿಗೊಳಿಸುತ್ತಿರುವಾಗ ಆಯ ತಪ್ಪಿ ಕೆಳಕ್ಕೆ ಬಿದ್ದು ಕೂಲಿ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಕೊಯಿನಾಡಿನಲ್ಲಿ ವರದಿಯಾಗಿದೆ. ಮಡಿಕೇರಿಯಲ್ಲಿ ಕೂಲಿ ಕಾರ್ಮಿಕನಾಗಿದ್ದ ಸುಗುಣ ಎಂಬ ಯುವಕ ಮೃತಪಟ್ಟ ವ್ಯಕ್ತಿ. ಕೊಯಿನಾಡಿನ ರಬ್ಬರ್ ಎಸ್ಟೇಟ್ನಲ್ಲಿ ಮನೆಯ ಶೀಟನ್ನು ದುರಸ್ತಿಗೊಳಿಸುತ್ತಿರುವಾಗ ಆಯತಪ್ಪಿ ಶೀಟು ಸಮೇತ ನೆಲಕ್ಕೆ ಬಿದ್ದು, ತಲೆಗೆ ಗಾಯಗೊಂಡ ಆತನನ್ನು ಸುಳ್ಯದ ಆಸ್ಪತ್ರೆಗೆ ತಂದು ಪರಿಶೀಲಿಸಿದಾಗ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.