ದುಗ್ಗಲಡ್ಕ ವ್ಯಾಪ್ತಿಯ ಬೀಟ್ ಪೋಲಿಸ್ ಸಭೆ ದುಗ್ಗಲಡ್ಕದಲ್ಲಿ ಇಂದು ಸಂಜೆ ನಡೆಯಿತು.
ಸುಳ್ಯ ಪೋಲಿಸ್ ಠಾಣೆಯ ಎ.ಎಸ್.ಐ.ತಾರಾನಾಥ,ಬೀಟ್ ಪೋಲಿಸ್ ಜಯರಾಮ ಭಾಗವಹಿಸಿ ,ಕಾನೂನು ಸುವ್ಯವಸ್ಥೆ, ಅಪರಾಧ ತಡೆಯುವ ಬಗ್ಗೆ,ಮಕ್ಕಳು ಮೊಬೈಲ್ ಬಳಸುವುದರಿಂದ ಆಗುವ ಪರಿಣಾಮ,ಮಕ್ಕಳು ವಾಹನ ಚಲಾಯಿಸುವುದರಿಂದ ಆಗುವ ಅಪಘಾತಗಳ ಬಗ್ಗೆ ಮಾಹಿತಿ ನೀಡಿದರು. ದುಗ್ಗಲಡ್ಕ ಜಂಕ್ಷನ್ ನಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸುವ ಕುರಿತು ಚರ್ಚಿಸಲಾಯಿತು. ವೇದಿಕೆಯಲ್ಲಿ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ, ದುಗ್ಗಲಡ್ಕ ಜುಮ್ಮಾಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.
ದುಗ್ಗಲಡ್ಕದ ಸಾರ್ವಜನಿಕ ಸಂಘ ಸಂಸ್ಥೆಗಳ ಪ್ರಮುಖರು, ಸದಸ್ಯರು ಭಾಗವಹಿಸಿದ್ದರು.
ಯತೀಶ್ ರೈ ದುಗ್ಗಲಡ್ಕ ವಂದಿಸಿದರು.