ಭಕ್ತನಿಂದ ಹೂವಿನ ಅಲಂಕಾರ ಸೇವೆ, ಹೂವಿನಿಂದ ಕಂಗೊಳಿಸುತ್ತಿದೆ ದೇವಸ್ಥಾನ
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವವು ಸಂಭ್ರಮದಿಂದ ನಡೆಯುತ್ತಿದ್ದು ಭಕ್ತರೋರ್ವರು ವಿಶೇಷವಾಗಿ ದೇವಸ್ಥಾನವನ್ನು ವಿವಿಧ ಬಗೆಯ ಹೂವಿನಿಂದ ಅಲಂಕರಿಸಿದ್ದಾರೆ.
ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ಐರಿಷ್ ಪ್ಲವರಿಷ್ ನ ಮಾಲಕ ಪೆರುವಾಜೆ ಗ್ರಾಮದ ಕೊಟ್ಟೆಕಾಯಿ ಉಮೇಶ್ ಮತ್ತು ಅವರ ಪತ್ನಿ ಪ್ರತಿ ವರ್ಷವೂ ದೇವಸ್ಥಾನದಲ್ಲಿ ಹೂವಿನ ಅಲಂಕಾರ ಸೇವೆ ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಹೂವಿನಿಂದ ಸುಂದರವಾಗಿ ವಿವಿಧ ವಿನ್ಯಾಸದ ಹೂವಿನಿಂದ ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣವನ್ನು ವಿಶಿಷ್ಟವಾಗಿ ಅಲಂಕರಿಸಿದ್ದಾರೆ.
ನೋಡುಗರಿಗೆ ಅತ್ಯಂತ ಸುಂದರವಾಗಿ ಕಾಣುತ್ತಿದ್ದು ಭಕ್ತಾದಿಗಳಿಗೆ ಆಕರ್ಷಣೀಯವಾಗಿದೆ.
ದೇವಸ್ಥಾನದ ಎದುರುಗಡೆಯ ಗೋಡೆಯನ್ನು ಎರಡೂ ಕಡೆಗಳಲ್ಲಿಯೂ ಗೋಡೆಕಾಣದಂತೆ ವಿವಿಧ ಬಗೆಯ ಬಣ್ಣ ಬಣ್ಣದ ಹೂವಿನಿಂದ ಅಲಂಕರಿಸಿದ್ದು ನೋಡುಗರಿಗೆ ಅತ್ಯಂತ ಆಕರ್ಷಣೀಯವಾಗಿ ಕಾಣುತ್ತಿದೆ.