ಬಳ್ಪ ಗ್ರಾಮದ ಬಳ್ಪ – ಕೇನ್ಯ ಗ್ರಾಮಗಳ ಗ್ರಾಮ ದೈವ ಶ್ರೀ ಉಳ್ಳಾಕುಲು ಮತ್ತು ಶ್ರೀ ಶಿರಾಡಿ ರಾಜನ್ ದೈವ ನೇರ್ಪು ಮಾಲ್ಯ ಇದರ ಪುನರ್ ಪ್ರತಿಷ್ಠಾ ಮಹೋತ್ಸವ ಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಹ್ಮಣ್ಯ ಬಳ್ಳುಕರಾಯರ ನೇತೃತ್ವದಲ್ಲಿ ಇಂದು ಜರಗಿತು.
ಜ. 18ರಂದು ರಾತ್ರಿ ಶ್ರೀ ಉಳ್ಳಾಕುಲು ಮತ್ತು ಮೈಷಂತಾಯ ದೈವಗಳ ಭಂಡಾರ ತೆಗೆದು ನೇಮೋತ್ಸವ ಆರಂಭಗೊಂಡು ಜ. 19ರಂದು ಪೂರ್ವಾಹ್ನ ಪ್ರಸಾದ ವಿತರಣೆ ನಡೆಯಿತು. ರಾತ್ರಿ 8.30ಕ್ಕೆ ಶಿರಾಡಿ ರಾಜನ್ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ನೇಮೋತ್ಸವ ಆರಂಭಗೊಂಡು ಜ. 20ರಂದು ಬೆಳಿಗ್ಗೆ 8.30ಕ್ಕೆ ದೈವಗಳ ಪೂವರಿ ನಡೆದು ಮಧ್ಯಾಹ್ನ 12.30ಕ್ಕೆ ಗಡಿಗೆ ಹೋಗುವ ಕಾರ್ಯಕ್ರಮ ನಡೆಯಲಿದೆ.