ಸುಳ್ಯ ತಾಲೂಕು ಬಿ.ಎಂ.ಎಸ್ ಅಟೋ ರಿಕ್ಷಾ ಚಾಲಕರ ಸಂಘ (ಬಿ.ಎಂ.ಎಸ್ ಸಂಯೋಜಿತ) ಪಂಜ ಘಟಕ ಇದರ 2020- 22 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭ ಜ.18 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಪಾರ್ವತಿ ಸಭಾಭವನದಲ್ಲಿ ಜರುಗಿತು.
ಪಂಜ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಹೇಮಂತ ಡಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ,ಆರ್ಯಭಟ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು , ಸುಳ್ಯ ತಾಲೂಕು ಬಿ.ಎಂ.ಎಸ್ ಘಟಕದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ಗಿರೀಶ್ ಗಿರೀಶ್ ಅರಂಬೂರು, ಸುಳ್ಯ ತಾಲೂಕು ಬಿ.ಎಂ.ಎಸ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಪಿ.ಗೋಪಾಲಕೃಷ್ಣ ಭಟ್ , ಪಂಜ ಘಟಕದ ಪೂರ್ವಾಧ್ಯಕ್ಷ ದೇವಪ್ಪ ಯಚ್ , ನೂತನ ಅಧ್ಯಕ್ಷ ನಾರಾಯಣ ಕೃಷ್ಣನಗರ ಮತ್ತು ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ :
ಸಾಮಾಜಿಕ ಸೇವಾಕರ್ತ,ಆರ್ಯಭಟ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು , ಹಿರಿಯ ಆಟೋ ರಿಕ್ಷಾ ಚಾಲಕ ನಾರಾಯಣ ಬೀದಿಗುಡ್ಡೆ ಯವರನ್ನು ಸನ್ಮಾನಿಸಲಾಯಿತು.ಘಟಕದ ಸದಸ್ಯ ,ಪಂಜ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ದೇರಾಜೆ ಯವರನ್ನು ಗೌರವಿಸಲಾಯಿತು.
ಪದಾಧಿಕಾರಿಗಳು : ನೂತನ ಅಧ್ಯಕ್ಷರಾಗಿ ನಾರಾಯಣ ಕೃಷ್ಣನಗರ, ಉಪಾಧ್ಯಕ್ಷರಾಗಿ ಮನೋಜ್ ಎನ್ನಾಲ, ಕಾರ್ಯದರ್ಶಿಯಾಗಿ ಗಿರೀಶ್ ಅಳ್ಪೆ, ಕೋಶಾಧಿಕಾರಿ ಹರಿಪ್ರಸಾದ್ ಬಳ್ಳಕ, ಜತೆ ಕಾರ್ಯದರ್ಶಿ ನಾಗೇಶ್ ಕುಳ್ಳಾಜೆ, ಪದಾಧಿಕಾರಿಗಳಾಗಿ ದೇವಪ್ಪ ಯಚ್, ಚಂದ್ರಶೇಖರ ದೇರಾಜೆ, ಬಾಲಕೃಷ್ಣ ಸಂಪ್ಯಾಡಿ, ರಾಜೇಶ್ ಪೂಜಾರಿ, ಲಕ್ಷ್ಮೀನಾರಾಯಣ, ಗಣೇಶ್ ನಾಗತೀರ್ಥ, ಸುಮಂತ್ ರೈ ಕೇನ್ಯ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ತಾರನಾಥ ನಾಗತೀರ್ಥ ಸ್ವಾಗತಿಸಿದರು. ನಾಗೇಶ್ ಕೊಳ್ಳಾಜೆ ವರದಿ ವಾಚಿಸಿದರು. ದಾಮೋದರ ನೇರಳ ನಿರೂಪಿಸಿದರು. ರಾಜೇಶ್ ಪೆನ್ ಕ್ಲೆ ವಂದಿಸಿದರು.