ಧಾರ್ಮಿಕ , ಸಾಂಸ್ಕೃತಿಕ,ಕ್ರೀಡಾ ಮತ್ತು ಅನೇಕ ಸಮಾಜಮುಖಿ ಸೇವೆಯ ನೀಡುವ ಮೂಲಕ ಸದಾ ಸುದ್ದಿಯಾಗುತ್ತಿರುವ ಪಂಜದ ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗವು ಮುಸ್ಲಿಂ ಸಮುದಾಯದ ಮನೆ ದುರಸ್ತಿಗೆ ನೆರವಾಗಿ ಸಾಮರಸ್ಯದ ಸೇವೆ ನೀಡಿದ್ದಾರೆ.
ಜುಲೇಕಾಬಿ ಅಬ್ದುಲ್ ರಹಿಮಾನ್ ನೆಲ್ಲಿಕಟ್ಟೆ ಯವರ ಮನೆ ದುರಸ್ತಿ ವೇಳೆ ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾರಂಗದ ಕರೆ ಸೇವೆಯಲ್ಲಿ ನೆರವು ಕೇಳಿದ್ದರು. ಕಲಾರಂಗದ ಸದಸ್ಯರು ಅವರ ಮನೆ ದುರಸ್ತಿ ಯಲ್ಲಿ ಕೈಜೋಡಿಸಿ ಸಾಮರಸ್ಯ ಹಗೂ ಸೌಹಾರ್ದತೆ ಮೆರೆದಿದ್ದಾರೆ. ಸಾಮರಸ್ಯ ಸೌಹಾರ್ದದಿಂದ ನೆರವಾಗಿರುವ ಕಲಾರಂಗ ಮಾದರಿ ಸಂಘಟನೆಯಾಗಿದೆ.