ಪುತ್ತೂರು ಮುಳಿಯ ಫೌಂಡೇಶನ್ ಮೂಲಕ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಸ್ವ- ಇಚ್ಛೆಯಿಂದ ಕೇಶದಾನ ಮಾಡುವುದರೊಂದಿಗೆ ಸುಳ್ಯದ ಯುವತಿ ದಿವ್ಯಾ ಮಿತ್ತಡ್ಕ ರವರು ಉದಾರತೆಯ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಇವರು ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ದಿ. ಪುಟ್ಟಣ್ಣ ಗೌಡರ ಪುತ್ರಿ. ಇಂಜಿನಿಯರಿಂಗ್ ಪದವೀಧರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇವರು ಇತ್ತೀಚೆಗೆ ತನ್ನ ತಂದೆಯವರ ಅಕಾಲಿಕ ನಿಧನದಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕೃಷಿ ಕಾರ್ಯ ಮಾಡುತ್ತಿದ್ದಾರೆ
ಡಿಸೆಂಬರ್ 30 ರಂದು ಕೇಶದಾನ ಮಾಡಿದ್ದೂ ಮುಳಿಯ ಫೌಂಡೇಶನ್ ವತಿಯಿಂದ ಅವರಿಗೆ ಅಭಿನಂದನ ಪತ್ರ ನೀಡಿ ಗೌರವಿಸಿದ್ದಾರೆ.