ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯೋರ್ವರು ಎಲಿಮಲೆಯ ಕ್ಯಾಂಟೀನ್ ಒಂದರ ಪಾತ್ರೆಗಳು ಮತ್ತು ಗ್ಯಾಸ್ ಸಿಲಿಂಡರನ್ನು ಎಸೆದು, ತನ್ನ ಮಗನ ಹೋಟೆಲ್ ಗೆ ನುಗ್ಗಿ ಮಗನಿಗೆ ಕತ್ತಿಯಿಂದ ಕಡಿದ ಘಟನೆ ನಿನ್ನೆ ತಡ ರಾತ್ರಿ ಎಲಿಮಲೆಯಿಂದ ವರದಿಯಾಗಿದೆ.
ಎಲಿಮಲೆಯ ರಾಜೇಶ್ (55) ಎಂಬವರೇ ಈ ರೀತಿ ಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ.
ಅವರು ನಿನ್ನೆ ರಾತ್ರಿ ಬಾಲಕೃಷ್ಣ ಎಂಬವರು ಎಲಿಮಲೆಯಲ್ಲಿ ನಡೆಸುತ್ತಿರುವ ಮಿನಿ ಕ್ಯಾಂಟೀನ್ ನ ಒಳನುಗ್ಗಿ ಪಾತ್ರೆಗಳನ್ನು ಅಲ್ಲೆ ಪಕ್ಕದಲ್ಲಿದ್ದ ಬಾವಿಗೆ ಎಸೆದಿದ್ದಲ್ಲದೇ, ಗ್ಯಾಸ್ ಸಿಲಿಂಡರನ್ನು ಸುಮಾರು ಅರ್ಧ ಕಿಮೀ. ಹೊತ್ತೊಯ್ದು ಬಿಸಾಡಿರುವುದಾಗಿ ತಿಳಿದು ಬಂದಿದೆ.
ಬಳಿಕ ಎಲಿಮಲೆಯಲ್ಲಿ ಹೋಟೆಲ್ ನಡೆಸುತ್ತಿರುವ ತನ್ನ ಪುತ್ರನ ರೂಮಿನ ಒಳನುಗ್ಗಿ ಅವರ ಕೈಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದು ಬಂದಿದೆ.
ಬಳಿಕ ಎಲ್ಲರೂ ಸೇರಿ ರಾಜೇಶ್ ರವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.