ಗುತ್ತಿಗಾರು ಗ್ರಾಮದ ಕಮಿಲ ಲಕ್ಷ್ಮಣ ಮಾಸ್ತರ್ ಜ.18 ರಂದು ಅಲ್ಪಕಾಲಿಕ ಅಸೌಖ್ಯತೆಯಿಂದ ಹಾಸನದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರ ಅಂತ್ಯಸಂಸ್ಕಾರ ಜ.19 ರಂದು ಕಮಿಲದಲ್ಲಿ ಮಾಡಲಾಯಿತು. ಮೃತರು ಪುತ್ರಿಯರಾದ ಶ್ರೀಮತಿ ಲೀಲಾವತಿ ಧರ್ಮಪಾಲ ಕಮಿಲ, ಶ್ರೀಮತಿ ವಾಸಂತಿ ಡಾ.ನಾಗರಾಜ್ ಹಾಸನ , ಶ್ರೀಮತಿ ರೇವತಿ ಚಂದ್ರಶೇಖರ ಹಾಸನ, ಶ್ರೀಮತಿ ಪದ್ಮಾವತಿ ಸತೀಶ್ ಎನ್ ಆರ್ ಪುರ ಚಿಕ್ಕಮಗಳೂರು, ಹಾಗೂ ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.