ಸುಬ್ರಹ್ಮಣ್ಯ ಬಿಸಿಲೆ ಘಾಟ್ ಬಳಿ ವ್ಯಕ್ತಿಯೋರ್ವರು ಪ್ರಾಣಾಪಾಯದಿಂದ ಚಡಪಡಿಸುತಿದ್ದಾಗ ಸುಬ್ರಹ್ಮಣ್ಯದ ಯುವತೇಜಸ್ಸು ನ ಆಂಬ್ಯೂಲೆನ್ಸ್ ತೆರಳಿ ರಕ್ಷಣೆಗೆ ಮುಂದಾದರೂ ವ್ಯಕ್ತಿ ದಾರಿ ಮಧ್ಯೆ ಮೃತ ಪಟ್ಟ ಘಟನೆ ವರದಿಯಾಗಿದೆ.
ಇಂದು ಬೆಳಗ್ಗೆ ದೂರವಾಣಿ ಕರೆ ಆಧರಿಸಿ ಸುಬ್ರಹ್ಮಣ್ಯದಿಂದ ಬಿಸಿಲೆ ಘಾಟ್ ನ ಚೌಡೇಶ್ವರಿ ಅಮ್ಮನ ಗುಡಿಯ ಹತ್ತಿರ ತೆರಳಿದ ಯುವತೇಜಸ್ಸ್ ಆಂಬ್ಯೂಲೆನ್ಸ್ ಅಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯೊಬ್ಬರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ವ್ಯಕ್ತಿ ಸಾವಿಗೀಡಾದರೆಂದು ತಿಳಿದುಬಂದಿದೆ. ಈ ವ್ಯಕ್ತಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರೆಂದು ಹೇಳಲಾಗಿದೆ. ಮೃತ ದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.