ಸುಳ್ಯ ಗಾಂಧಿನಗರ ನಿವಾಸಿ ಆಸ್ಕರ್ ಕಳೆದ ಸೆ.27 ರಂದು ಸುಳ್ಯದಿಂದ ಕಾಶ್ಮೀರಕ್ಕೆ 7000 ಕಿ.ಮಿ ಸೈಕಲ್ ನಲ್ಲಿ ಸಂಚರಿಸಿ ಅಲ್ಲಿಂದ ಲಡಾಖ್ ತೆರಳಿ ಅಲ್ಲಿಂದ ಮರಳಿ ಇಂದು ಸುಳ್ಯಕ್ಕೆ ಹಿಂದಿರುಗಿ ಸುಳ್ಯ ಜ್ಯೋತಿ ಸರ್ಕಲ್ ಬಳಿ ತಲುಪುತ್ತಿರುವ ಸಂದರ್ಭದಲ್ಲಿ ಸುಳ್ಯ ಶ್ರಿರಾಂ ಪೇಟೆ ಬಿ.ಎಂ ಎ ವೇಜಿಟೇಬಲ್ಸ್ ಬಳಿ ಸ್ವಾಗತಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸೀಪುಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಪುಡ್, ಲತೀಫ್ ಬಿಎಂಎ,ಮಹಮ್ಮದ್ ಸುಳ್ಯ ಎಂಟರ್ ಪ್ರೈಸಸ್, ಅನಿವಾಸಿ ಉದ್ಯಮಿ ಹಮೀದ್ ಹಳೆಗೇಟು,ಉಸ್ಮಾನ್ ಜಯನಗರ,ಸಿರಾಜ್,ಇಸಾಕ್,ಅಬ್ಬಿ ಗಾಂಧಿನಗರ ಮೊದಲಾದವರು ಉಪಸ್ಥಿತರಿದ್ದರು.