ರಾಜ್ಯಸಭಾ ಸಂಸತ್ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್ ರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 4ಲಕ್ಷ ಅನುದಾನದಲ್ಲಿ ಅನುಷ್ಠಾನಗೊಂಡ ಮಲ್ಲಾರ – ಕಡಂಬಿಲ – ಕೆಬ್ಬೋಡಿ ಕಾಂಕ್ರೀಟ್ ರಸ್ತೆಯನ್ನು ಸುಬ್ರಹ್ಮಣ್ಯ ಕ್ಷೇತ್ರದ ನಿಕಟಪೂರ್ವ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಜ. 18ರಂದು ಉದ್ಘಾಟಿಸಿದರು.
ಸುಬ್ರಹ್ಮಣ್ಯ ಗ್ರಾ.ಪಂ. ಮಾಜಿ ಅಧ್ಯಕ್ಷ ಮನೋಹರ ನಾಳ, ಹಿರಿಯ ಕ್ರೀಡಾಪಟು ಎಂ.ಎಂ. ರಾಮಯ್ಯ ಮಾದನಮನೆ, ಗಂಗಾಧರ ಕಾಮಧೇನು, ಜಯಪ್ರಕಾಶ್ ಕೋಟಿಗೌಡನಮನೆ, ರಾಮಣ್ಣ ಗೌಡ ಬೂದಿಪಳ್ಳ, ಗಂಗಾಧರ ಪೈಲಾಜೆ, ರಾಮಚಂದ್ರ, ಗಿರಿಧರ ಅಂಬೆಕಲ್ಲು, ರಾಜೇಶ್ ಕೋಟಿಗೌಡನಮನೆ, ಶ್ರೀಕಾಂತ್ ಅಂಬೆಕಲ್ಲು, ಜಯಪ್ರಕಾಶ್ ನಡ್ಕ, ದಿನೇಶ್ ಕೈಯಾಳ, ಸುಧೀರ್ ತೋಟ, ಆನಂದ ಪರಮಲೆ, ಸುಧೀರ್ ಮಾಯೆ, ಅಶೋಕ ಅಂಬೆಕಲ್ಲು, ಹರ್ಷಿತ್ ಎನ್.ಜಿ, ರಮೇಶ್ ನಾಯ್ಕ ಬೂದಿಪಳ್ಳ, ಬೆಳ್ಯಪ್ಪ ಮಾದನಮನೆ, ಗಗನ್, ಲೋಕೇಶ್ ಅಮೈ, ನೀಲಪ್ಪ ಮಲ್ಲಾರ, ತೇರಕುಮಾರ್ ಮಾದನಮನೆ, ಪುಷ್ಯರಾಜ್ ಚೊಕ್ಕಾಡಿ, ಶ್ರೀಧರ ಮಾದನಮನೆ, ಉದಯ ಪರಮಲೆ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮನೋಹರ ನಾಳ ಸ್ವಾಗತಿಸಿ ನಿತಿನ್ ಬೂದಿಪಳ್ಳ ಕಾರ್ಯಕ್ರಮ ನಿರೂಪಿಸಿದರು.