ಸಹೋದರರ ಸ್ಪರ್ಧೆ ಯಾರೂ ಬಯಸುವಂತದ್ದಾಗಿರಲಿಲ್ಲ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಡಾ. ರೇಣುಕಾ ಪ್ರಸಾದ್‌ರನ್ನು ಬೆಂಬಲಿಸುವುದು ನಮ್ಮ ಬದ್ಧತೆಯಾಗಿತ್ತು

ಇನ್ನಾದರೂ ಸಮಸ್ಯೆ ಪರಿಹಾರಕ್ಕೆ ಸಹೋದರರು ಮನಸ್ಸು ಮಾಡಬೇಕು

ಸಮರ್ಪಣಾ ಸಮಾವೇಶದಲ್ಲಿ ಭರತ್ ಮುಂಡೋಡಿ ನುಡಿ

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸಹೋದರರ ನಡುವಿನ ಸ್ಪರ್ಧೆಯನ್ನು ಸಮಾಜ ಅಥವಾ ಸಮಾಜದ ಮುಖಂಡರು ಬಯಸಿರಲಿಲ್ಲ, ಸಂತೋಷ ಪಡುವಂತದ್ದೂ ಆಗಿರಲಿಲ್ಲ. ಆದರೆ ಚುನಾವಣೆಯ ಸಂದರ್ಭದಲ್ಲಿ ಡಾ. ಕೆ.ವಿ ರೇಣುಕಾ ಪ್ರಸಾದ್ ಅವರನ್ನು ಬೆಂಬಲಿಸುವುದು ನಮ್ಮ ಬದ್ಧತೆಯಾಗಿತ್ತು. ಅದರಂತೆ ನಡೆದುಕೊಂಡಿದ್ದೇವೆ. ಅದರೆ ಇನ್ನೂ ಕೂಡ ನಾವು ಆಶಾವಾದಿಗಳಾಗಿದ್ದೇವೆ. ಸಹೋದರರು ಒಗ್ಗಟ್ಟಿನಿಂದ ಇರುವುದನ್ನು ನಾವು ನಿರೀಕ್ಷಿಸುತ್ತೇವೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ ಹೇಳಿದ್ದಾರೆ.


ಸುಳ್ಯದಲ್ಲಿ ನಡೆದ ಡಾ. ಕೆ.ವಿ ರೇಣುಕಾ ಪ್ರಸಾದ್ ಅಭಿನಂದನ ಸಮರಂಭ ಮತ್ತು ಸಮರ್ಪಣಾ ಸಮವೇಶದಲ್ಲಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಡಾ. ಕುರುಂಜಿಯವರ ಆಶಯದ ಮೇರೆಗೆ ೨೦೦೪ರ ನಂತರ ಡಾ. ಕೆ.ವಿ ರೇಣುಕಾ ಪ್ರಸಾದ್ ಅವರು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ಈ ಬಾರಿ ಚುನಾವಣೆಯ ಆರಂಭದಲ್ಲಿಯೇ ನಮ್ಮೆಲ್ಲರೊಂದಿಗೆ ಸಮಾಲೋಚಿಸಿ ಬೆಂಬಲದ ಭರವಸೆ ಪಡೆದಿದ್ದರು. ಸಮುದಾಯದ ಎಲ್ಲರೊಂದಿಗೂ ಸ್ಪರ್ಧಿಸುವ ವಿಷಯ ತಿಳಿಸಿದ್ದರು. ತನ್ನ ಅಣ್ಣನೂ ಆಶೀರ್ವಾದ ಮಾಡಿದ್ದಾಗಿ ಹೇಳಿದ್ದರು. ನಮಗೆ ತಿಳಿದುಬಂದ ಪ್ರಕಾರ ಆಗ ಭಾಸ್ಕರ ದೇವಸ್ಯರವರು ಪ್ರತಿಸ್ಪರ್ಧಿಗಳಾಗಿದ್ದರು. ಆದರೆ ಸುಳ್ಯದವರೇ ಮತ್ತು ಕುರುಂಜಿ ಮನೆತನದವರೂ ಆದ ಡಾ.ಕೆ.ವಿ ರೇಣುಕಾಪ್ರಸಾದ್ ಅವರು ಸ್ಪರ್ಧಿಯಾಗಿದ್ದುದರಿಂದ ಅವರನ್ನು ಬೆಂಬಲಿಸುವ ನಿರ್ಧಾರ ಮಾಡಿದ್ದೆವು. ನಾಮಪತ್ರ ಸಲ್ಲಿಕೆಯ ಹಿಂದಿನ ದಿನವೂ ರೇಣುಕಾ ಪ್ರಸಾದ್‌ರವರು ನಮ್ಮನ್ನು ಬರಹೇಳಿ ಬೆಂಬಲ ಯಾಚಿಸಿದ್ದರು. ಬಳಿಕ ಡಾ. ಕೆ.ವಿ ಚಿದಾನಂದರು ಸಮುದಾಯದ ಪ್ರಮುಖರನ್ನು ಬರ ಹೇಳಿದಾಗ ಅವರ ಮೇಲಿನ ಗೌರವದಿಂದ ನಾವೆಲ್ಲರು ಹೋಗಿದ್ದೆವು. ಅಲ್ಲಿ ಅವರು ತಾನು ಸ್ಪರ್ಧಿಸುವ ವಿಚಾರ ಹೇಳಿದಾಗ, ನಿಮ್ಮ ಮೇಲೆ ಅಪಾರ ಗೌರವ ಇದೆ. ಚುನಾವಣಾ ಕಣ ತಮಗೆ ಹಿಡಿಸಿದ್ದಲ್ಲವೆಂದೂ, ಅದನ್ನು ನಾವು ಬಯಸುವುದಿಲ್ಲ. ಸಮಾಜಕ್ಕೆ ಇದರಿಂದ ತಪ್ಪು ಸಂದೇಶ ಹೋಗುತ್ತದೆ. ಎಂದು ನಾವೆಲ್ಲ ಹೇಳಿದ್ದಲ್ಲದೆ ಸ್ಪರ್ಧಿಸದಂತೆ ವಿನಂತಿಸಿದ್ದೆವು. ಮರುದಿನ ನಮಗೆ ಶಾಕಿಂಗ್ ನ್ಯೂಸ್ ಬಂದಿತ್ತು. ಡಾ. ಕೆ.ವಿ. ಚಿದಾನಂದರು ನಾಮಪತ್ರ ಸಲ್ಲಿಸಿದ್ದರು. ಮತ್ತೂ ನಾವು ನಮ್ಮ ಪ್ರಯತ್ನ ಕೈ ಬಿಟ್ಟಿರಲಿಲ್ಲ. ಬಳಿಕದ ಬೆಳವಣಿಗೆಗಳಲ್ಲಿ ಕೆ.ಜಿ.ಬೋಪಯ್ಯ ನವರು ಸುಳ್ಯಕ್ಕೆ ಬಂದಿದ್ದಾಗ ನಾವು ಭೇಟಿಯಾಗಿ ನಮ್ಮ ಭಾವನೆಗಳನ್ನು ಹೇಳಿ ಚಿದಾನಂದರನ್ನು ಸ್ಪರ್ಧಿಸದಂತೆ ಪ್ರಭಾವ ಬೀರಬೇಕೆಂದು ವಿನಂತಿಸಿದ್ದೆವು. ಅದರಂತೆ ಬೋಪಯ್ಯನವರೂ ಚಿದಾನಂದರೊAದಿಗೆ ಮಾತನಾಡಿದ್ದರು. ಆದರೂ ಅವರು ಮನವಿಯನ್ನು ಪುರಸ್ಕರಿಸದಿದ್ದುದರಿಂದ ಕೊನೆಗೆ ಸ್ಪರ್ಧೆಯೇ ಎದುರಾಯಿತು. ಆದರೆ ಆಗ ನಾವು ನಾವು ಕೊಟ್ಟ ಮಾತಿನಂತೆ ಬದ್ಧತೆಯಿಂದ ಡಾ. ರೇಣುಕಾ ಪ್ರಸಾದ್ ಅವರನ್ನು ಬೆಂಬಲಿಸುವ ನಿರ್ಧಾರ ಮಾಡಿ ಪ್ರಚಾರಕಾರ್ಯ ಆರಂಭಿಸಿದೆವು ಎಂದು ಭರತ್ ಮುಂಡೋಡಿ ಹೇಳೀದರು.
ಇನ್ನಾದರೂ ನಾವು ಆಶಾವಾದಿಗಳಾಗಿದ್ದೇವೆ. ಈ ಒಂದು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಸಹೋದರರಿಬ್ಬರೂ ಕೂಡ ಮನಸ್ಸುಮಾಡಬೇಕು, ಹಿಂದಿನದನ್ನು ಮರೆಯಬೇಕು ಇವತ್ತಿನ ವಾಸ್ತವಿಕತೆಯನ್ನು ಅರಿಯಬೇಕು, ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಬೇಕು ಎಂದು ಅವರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.