25 ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮಂಡೆಕೋಲಿನ ತೋಟಪ್ಪಾಡಿ ವಯನಾಟ್ ಕುಲವನ್ ದೈವಸ್ಥಾನ

ಮಂಡೆಕೋಲು ಗ್ರಾಮದ ತೋಟಪ್ಪಾಡಿಯಲ್ಲಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಶ್ರೀ ವಯನಾಟ್ ಕುಲವನ್ ದೈವಸ್ಥಾನ ಜೀರ್ಣೋದ್ಧಾರ ಗೊಳ್ಳುತ್ತಿದೆ.

ಸುಮಾರು 8 ಶತಮಾನಗಳ ಹಿಂದೆ ಕೇರಳದ ಪಾಡಿ (ತೋಟ) ಎಂಬಲ್ಲಿಂದ ಬಂದು ತೋಟಪ್ಪಾಡಿಯಲ್ಲಿ ನೆಲೆನಿಂತ ದೈವ ವಯನಾಟ್ ಕುಲವನ್. ಹೊಸ ಭಗವತಿ, ಪೊಟ್ಟನ್ ಮತ್ತು ನಾಗ ಹಿಂದೊಮ್ಮೆ ವಿಜೃಂಭಣೆಯಿಂದ ದೂಪದೀಪಾಧಿ ನಿತ್ಯ – ಮೈಮಿತ್ತಿಕ ಆರಾಧನೆಯಿಂದ ನಡೆದುಕೊಂಡು ಬರುತ್ತಿದ್ದ ಈ ದೈವಸ್ಥಾನವು ಭವಿಷ್ಯದಲ್ಲಿ ಬಂದ ಒಕ್ಕಲು ಮಸೂದೆ ಮುಂತಾದ ಕಾರಣಗಳಿಂದ ಆರಾಧನೆಯಿಲ್ಲದೆ ಜೀರ್ಣಾವಸ್ಥೆಗೆ ತಲುಪಿ ಇಂದಿಗೆ ಸರಿಸುಮಾರು 40 ವರ್ಷಗಳೇ ಗತಿಸಿ ಹೋದವು. ಇದರ ಪರಿಣಾಮವಾಗಿ ಕುಪಿತಗೊಂಡ ಪರಿಸರದ ದೈವವಾದ ಶ್ರೀ ವಯನಾಟ್ ಕುಲವನ್ ಈ ಭಾಗದ ಜನರ ಆಶೋತ್ತರ ಸುಖ – ನೆಮ್ಮದಿಗಳಿಗೆ ಮಾರಕವಾಗಿ ಪರಿಣಮಿಸಿದ ಪರಿಣಾಮವಾಗಿ ಅಷ್ಟಮಂಗಲ ಪ್ರಶ್ನಾಚಿಂತನೆ ಮಾಡಬೇಕಾಯಿತು. ಆ ಚಿಂತನೆಯಲ್ಲಿ ದೈವಸ್ಥಾನ ಜೀರ್ಣೋದ್ಧಾರ ಆಗಬೇಕಾಗಿ ಕಂಡುಬಂದುದರಿಂದ ಅದಕ್ಕಾಗಿ ಜೀರ್ಣೋದ್ಧಾರ ಸಮಿತಿ‌ ರಚಿಸಿ ಕೆಲಸ ಕಾರ್ಯ ಆರಂಭಿಸಲಾಯಿತು. 2016 ರಿಂದ ಕೆಲಸ ಕಾರ್ಯಗಳು ಆರಂಭಗೊಂಡಿದ್ದು ಇದೀಗ ಪೂರ್ಣಗೊಂಡಿದೆ.

ಈ ದೈವಸ್ಥಾನಕ್ಕೆ ಊರ, ಪರವೂರ ದಾನಿಗಳು ಸಹಕಾರ ನೀಡಿದ್ದು ಭವ್ಯವಾದ ದೈವಸ್ಥಾನ ಕೆಲಸ ಆಗಿದೆ. ಜತೆಗೆ ತರವಾಡುಮನೆ, ಕೊಟ್ಟಿಗೆಯ ಕೆಲಸವು ಆಗಿದೆ.

*ಫೆಬ್ರವರಿ 12, 13 ರಂದು ಪುನಃಪ್ರತಿಷ್ಠೆ*

ದೈವಸ್ಥಾನದಲ್ಲಿ ಗೃಹಪ್ರವೇಶ ಹಾಗೂ ಪುನಃಪ್ರತಿಷ್ಠೆಯು 2022 ರ ಫೆ.12 ಮತ್ತು 13 ರಂದು ನಡೆಯಲಿದೆ.

ಫೆ. 3 ರಂದು ನೂತನವಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶ. ಫೆ.4 ರಂದು ಗೊನೆ ಕಡಿಯುವುದು. ಫೆ.12 ರಂದು ದೈವಸ್ಥಾನದ ಕುತ್ತಿಪೂಜೆ, ಫೆ.13 ರಂದು ಶ್ರೀ ವಿಷ್ಣುಮೂರ್ತಿ, ಶ್ರೀ ವಯನಾಟ್ ಕುಲಕವನ್, ಶ್ರೀ ಹೊಸಭಗವತಿ ಮತ್ತು ಶ್ರೀ ಪೊಟ್ಟನ್ ದೈವಗಳ ಪುನಃ ಪ್ರತಿಷ್ಠೆ ನಡೆಯುವುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.