ಪ್ರತಿಭಟನೆಗೆ ಮುಂದಾದ ದಲಿತ ಸಂಘಟನೆ – ಪ್ರತಿಭಟನೆ ನಡೆಸದಂತೆ ಬೆಳ್ಳಾರೆ ಪೋಲೀಸರಿಂದ ಮನವೊಲಿಕೆ
ಪ್ರತಿಭಟನೆ ಹಿಂತೆಗೆತ
ಬೆಳ್ಳಾರೆ ಗ್ರಾಮ ಪಂಚಾಯತ್ ನಲ್ಲಿ ಚಾಲಕ ಕಂ. ಸ್ವಚ್ಚತಗಾರನ ನೆಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಸೀತಾರಾಮ ಎಂಬವರನ್ನು ಸೇವೆಯಿಂದ ವಜಾಗೊಳಿಸಿದ ಗ್ರಾಮ ಪಂಚಾಯತ್ ಆಡಳಿತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸುಳ್ಯ ತಾಲೂಕು ಇದರ ವತಿಯಿಂದ ವಿವಿಧ ದಲಿತ ಸಂಘಟನೆಗಳು ಹಾಗೂ ಸಮಾನ ಮನಸ್ಕರ ಸಹಯೋಗದಲ್ಲಿ ಇಂದು ಬೆಳ್ಳಾರೆ ಗ್ರಾಮಸಭೆ ನಡೆಯುವ ರಾಜೀವ್ ಗಾಂಧಿ ಸೇವಾ ಕೇಂದ್ರದ ಎದುರು ಪ್ರತಿಭಟನೆಗೆ ಮುಂದಾಗಿದ್ದರು.
ಪ್ರತಿಭಟನೆ ಹಿಂಪಡೆಯುವಂತೆ ಬೆಳ್ಳಾರೆ ಎಸ್. ಐ. ಆಂಜನೇಯ ರೆಡ್ಡಿ ಹಾಗೂ ಪೋಲೀಸರು ಬಂದು ಮನವೊಲಿಸಲು ಪ್ರಯತ್ನಿಸಿದರು.
ಆದರೆ ದಲಿತ ಮುಖಂಡ ಆನಂದ ಬೆಳ್ಳಾರೆಯವರು ಇದಕ್ಕೆ ಒಪ್ಪದೇ ಸೀತಾರಾಮ ರವರಿಗೆ ಅನ್ಯಾಯ ಆಗಿದೆ. ನಮಗೆ ನ್ಯಾಯ ಕೊಡ್ಸಿ ಸರ್ ಎಂದು ಮನವಿ ಮಾಡಿದರು. ಬಳಿಕ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಯವರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಂದು ಘಟನೆಯ ಬಗ್ಗೆ ಸಮರ್ಥನೆ ನೀಡಿದರು. ಆದರೆ ಇದಕ್ಕೆ ಒಪ್ಪದೇ ಅನಿಲ್ ರೈ ಮತ್ತಿತರರು ಬಂದು ಗ್ರಾಮ ಸಭೆ ನೀವು ನಡೆಸಿ, ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಅಲ್ಲದೇ ಬ್ಯಾನರ್ ಫಲಕ ಹಿಡಿದುಕೊಂಡರು.
ಅಧ್ಯಕ್ಷರು ಹಾಗೂ ಪಿ.ಡಿ.ಒ. ಗ್ರಾಮ ಸಭೆ ನಡೆಸೋಣ ಎಂದು ಒಳಗಡೆ ತೆರಳಿದರು. ಬಳಿಕ ಎಸ್.ಐ. ಆಂಜನೇಯ ರೆಡ್ಡಿಯವರು ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ. ಪ್ರತಿಭಟನೆ ನಡೆಸಬೇಡಿ ಎಂದಾಗ 10 ನಿಮಿಷ ಕಾಲಾವಕಾಶ ನೀಡಿ, ಪ್ರತಿಭಟನೆಗೆ ಸಾಂಕೇತಿಕ ಚಾಲನೆ ನೀಡಿದರು. ಪೊಲೀಸರು ಹಾಗೂ ಪಂಚಾಯತ್ ನವರು ಮನವೊಲಿಸಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಇದೀಗ ಗ್ರಾಮ ಸಭೆ ಆರಂಭಗೊಂಡಿದೆ.
ಬಳಿಕ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ 15 ದಿನಗಳೊಳಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಪಿ.ಡಿ.ಓ.ರವರು ಲಿಖಿತವಾಗಿ ಓದಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.ಬಳಿಕ ಗ್ರಾಮ ಸಭೆ ಮುಂದುವರಿಯಿತು.