ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಪಿಕಪ್ ಡಿಕ್ಕಿಯಾದ ಪರಿಣಾಮ ಗಂಭಿರ ಗಾಯಗೊಂಡ ವ್ಯಕ್ತಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಸುಳ್ಯ ಪೈಚಾರಿನ ನವೀನ್ ಕುಮಾರ್ (60) ಮೃತಪಟ್ಟ ವ್ಯಕ್ತಿ.
ಅಡ್ಕಾರಿನಲ್ಲಿ ರೇಷನ್ ಪಡೆಯಲು ತೆರಳಿದ್ದ ವ್ಯಕ್ತಿ ಬಸ್ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಆ ರಸ್ತೆಯಾಗಿ ಬಂದ ಪಿಕಪ್ ಢಿಕ್ಕಿಯಾಯಿತು. ಪರಿಣಾಮ ನವೀನರು ರಸ್ತೆಗೆ ಎಸೆಯಲ್ಪಟ್ಟು ಗಂಭಿರ ಗಾಯಗೊಂಡರು. ಪಿಕಪ್ ನವರೇ ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.