ಜೇಸಿಐ ಸುಳ್ಯ ಪಯಸ್ವಿನಿ ಇದರ 2022 ನೇ ಸಾಲಿನ ಅಧ್ಯಕ್ಷ ರಂಜಿತ್ ಕುಕ್ಕೆಟ್ಟಿ ಮತ್ತು ತಂಡದ ಪದಪ್ರದಾನ ಸಮಾರಂಭ ಜ.24 ರಂದು ಸುಳ್ಯದ ಜೆಸಿ ಭವನದಲ್ಲಿ ನಡೆಯಲಿದೆ ಎಂದು ಜೆಸಿಐ ಸುಳ್ಯ ಪಯಸ್ವಿನಿ ಮಾಜಿ ಅಧ್ಯಕ್ಷ ದೇವರಾಜ್ ಕುದ್ಪಾಜೆ ಹೇಳಿದರು.
ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆವರು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನ್ಯಾಯವಾದಿ ನಳಿನ್ ಕುಮಾರ್ ಕೋಡ್ತುಗುಳಿ, ಜೆಸಿಐ ಇಂಡಿಯಾದ ಜಿಎಲ್ ಸಿ ಸೌಜನ್ಯ ಹೆಗ್ಡೆ ಭಾಗವಹಿಸುವರು.
ವಲಯ 15 ರ ಮಾಜಿ ವಲಯಾಧ್ಯಕ್ಷ ಅಶೋಕ್ ಚೂಂತಾರ್, ವಲಯ ಉಪಾಧ್ಯಕ್ಷ ಪ್ರಶಾಂತ್ ಲಾಯಿಲ ಅತಿಥಿಗಳಾಗಿರುವರು ಎಂದು ಅವರು ಹೇಳಿದರು.
ಬಸ್ ತಂಗುದಾಣ ಉದ್ಘಾಟನೆ : ಕಳೆದ ಬಾರಿ ಜೆಸಿಐ ಸುಳ್ಯ ಪಯಸ್ವಿನಿ ನೇತೃತ್ವದಲ್ಲಿ ಅಜ್ಕಾವರದಲ್ಲಿ ನಿರ್ಮಿಸಲುದ್ದೇಶಿಸಿದ ಬಸ್ ತಂಗುದಾಣದ ಕೆಲಸ ಪೂರ್ಣಗೊಂಡಿದ್ದು ಅದನ್ನು ದಿ.ಅಪ್ಪಯ್ಯ ಬಂಡಾರಿ ಸ್ಮರಣಾರ್ಥ ಮಾಡಲಾಗಿದೆ. ಇದರ ಉದ್ಘಾಟನೆಯೂ ಜ.24 ರಂದು ಸಂಜೆ ನಡೆಯುವುದು ಎಂದು ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಗುರುರಾಜ್ ಅಜ್ಜಾವರ ಹೇಳಿದರು. ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆಯವರು ಇದರ ಉದ್ಘಾಟನೆ ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ನೂತನ ಅಧ್ಯಕ್ಷ ರಂಜಿತ್ ಕುಕ್ಕೆಟ್ಟಿ, ರವಿಕುಮಾರ್ ಅಕ್ಕೋಜಿಪಾಲ್ ಇದ್ದರು.