ಸುಳ್ಯ ನಗರ ಪಂಚಾಯತ್ ನ ಎಸ್ ಎಫ್ ಸಿ ಅನುದಾನ ಹಾಗೂ ಪಂಚಾಯಿತ್ ನ ಮುಕ್ತ ನಿಧಿಯಿಂದ ನಗರದ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳಿಂದ ಪಕ್ಕಾ ಮನೆ ಪೂರ್ಣಗೊಳಿಸಲು ಗರಿಷ್ಠ ರೂ.50 ಸಾವಿರ ಹಾಗೂ ಮನೆ ರಿಪೇರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಆದಾಯ ಪ್ರಮಾಣಪತ್ರ, ವೈಯಕ್ತಿಕ ಭಾವಚಿತ್ರ ಹಾಗೂ ಮನೆಯ ಫೋಟೊದೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಜನವರಿ 31 ರೊಳಗಾಗಿ ಸಲ್ಲಿಸತಕ್ಕದ್ದು. ಈಗಾಗಲೇ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಫಲಾನುಭವಿಗಳ ಆಯ್ಕೆ ಯಾದ 45 ದಿನಗೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ತಕ್ಕದ್ದು.