ಮೀನು ಮಾರುಕಟ್ಟೆ , ಚರಂಡಿ ವ್ಯವಸ್ಥೆ ಬಗ್ಗೆ ಸುಧೀರ್ಘ ಚರ್ಚೆ
ಬೆಳ್ಳಾರೆ ಗ್ರಾಮ ಪಂಚಾಯತ್ 2021 – 22 ನೇ ಸಾಲಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆಯವರ ಅಧ್ಯಕ್ಷತೆಯಲ್ಲಿ ಜ.21 ರಂದು ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅನುಷಾ ಡಿ.ವರದಿ ಮಂಡಿಸಿದರು.
ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ರಶ್ಮಿ ಕೆ.ಎಂ.ನೋಡೆಲ್ ಅಧಿಕಾರಿಯಾಗಿದ್ದರು.
ಮೀನು ಮಾರುಕಟ್ಟೆ ಏಲಂ ಬಗ್ಗೆ , ಪೇಟೆಯ ಚರಂಡಿ ವ್ಯವಸ್ಥೆ,ವಿದ್ಯುತ್,ಮೂಲಸೌಕರ್ಯಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಯಿತು.
ಸಾಕಷ್ಟು ಚರ್ಚೆಗಳು ನಡೆಯುತ್ತಾ ಮಧ್ಯಾಹ್ನ ನಂತರವೂ ಗ್ರಾಮ ಸಭೆ ಮುಂದುವರಿಯಿತು.
ಈಗಲೂ ಗ್ರಾಮ ಸಭೆ ನಡೆಯುತ್ತಿದೆ.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು,
ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ಅನಿಲ್ ರೈ ಪುಡ್ಕಜೆ, ಇಕ್ಬಾಲ್ ಬೆಳ್ಳಾರೆ,ಶ್ರೀಮತಿ ಜಯಶ್ರೀ, ವೀಣಾ, ಮೋಹಿನಿ ಕೆ.ಟಿ, ನಮಿತ ಎಲ್.ರೈ, ಭವ್ಯ ರವಿಕುಮಾರ್,ದಿನೇಶ್ಚಂದ್ರ ಹೆಗ್ಡೆ,ಎನ್.ಎಸ್.ಡಿ.ವಿಠಲದಾಸ್, ಎಂ.ನಸೀಮಾ, ಮಣಿಕಂಠ ಮತ್ತು ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.