ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ಮಾಸಿಕ ಸಭೆಯು ಒಕ್ಕೂಟದ ಉಪಾಧ್ಯಕ್ಷರಾದ ರಮಣಿ ಯವರ ಅಧ್ಯಕ್ಷತೆಯಲ್ಲಿ ಜ.24 ರಂದು ನಡೆಯಿತು.ಪಂಚಾಯತ್ ನ ಅಧ್ಯಕ್ಷರಾದ ಲಲಿತ ಗುಂಡಡ್ಕ, ಒಕ್ಕೂಟದ ಕಾರ್ಯದರ್ಶಿ ಮೀನಾಕ್ಷಿ.ಪಿ, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಯಶಸ್ವಿನಿ ಸಂಜೀವಿನಿ ಸ್ವಸಹಾಯಸಂಘ, ಮತ್ತು ಪ್ರಕೃತಿ ಸಂಜೀವಿನಿ ಸ್ವ ಸಹಾಯ ಸಂಘದ ಸದಸ್ಯರಿಗೆ ಸ್ವಉದ್ಯೋಗ ಮಾಡಲು ಒಟ್ಟು 150000 ರೂ ಚೆಕ್ ವಿತರಣೆ ಮಾಡಲಾಯಿತು.
ಎಲ್.ಸಿ.ಆರ್.ಪಿ ರತ್ನಕುಮಾರಿ ಸ್ವಾಗತಿಸಿದರು. ಎಂ.ಬಿ.ಕೆ ಹೇಮಾವತಿ ವರದಿ ವಾಚಿಸಿದರು. ಎಲ್.ಸಿ.ಆರ್.ಪಿ ಕವಿತಾ ಧನ್ಯವಾದಿಸಿದರು.