ಸುಬ್ರಹ್ಮಣ್ಯ ಗ್ರಾ.ಪಂ ನ ಮೊದಲ ಹಂತದ ಗ್ರಾಮ ಸಭೆ ಜ.25 ರಂದು ಪಂಚಾಯತ್ ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷೆಯನ್ನು ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು. ಕಡಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಹಕಾ ಅಭಿಯಂತರರಾದ ಸಜಿ ಕುಮಾರ್ ನೊಡೆಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷರಾದ ಸವಿತಾ ಕೆ ಭಟ್, ಗಿರೀಶ್ ಆಚಾರ್ಯ, ಭಾರತಿ ಮೂಕಮಲೆ, ಮಲ್ಲಿಕಾ ಕೆ, ರಾಜೇಶ್ ಕುದುರೆಮಜಲು, ನಾರಾಯಣ ಅಗ್ರಹಾರ, ವೆಂಕಟೇಶ್ ಎಚ್ ಎಲ್, ಭರತ್ , ಶಿವರಾಮ ನೆಕ್ರಾಜೆ, ದಿನೇಶ್ ರಾವ್, ದಿವ್ಯ ಬಿ, ಭವ್ಯ ಕುಮಾರಿ, ಜಯಂತಿ ಪರಮಲೆ, ಮೋಹನ ಗೌಡ ಕೋಟಿಗೌಡನ ಮನೆ, ಹರೀಶ್ ಇಂಜಾಡಿ, ಶಶಿಕಲಾ ಕಲ್ಕುದಿ, ಸುಜಾತ, ದಿಲಿಪ್, ಪುಷ್ಪಲತಾ, ಶಿವರಾಮ ನೆಕ್ರಾಜೆ, ಜಯಂತಿ ಕೆ, ಸೌಮ್ಯ, ಭಾರತಿ ದಿನೇಶ್, ಶಶಿಕಲಾ, ಪಿಡಿಒ ಯು ಡಿ ಶೇಖರ್ ಉಪಸ್ಥಿತರಿದ್ದರು. ಪಿಡಿಒ ಸ್ವಾಗತಿಸಿ, ಕಾರ್ಯದರ್ಶಿ ಮೋನಪ್ಪ ವರದಿ ವಾಚಿಸಿದರು.
ಗ್ರಾಮ ಸಭೆಯಲ್ಲಿ ಇಲಾಖಾಧಿಕಾರಿಗಳಾದ ಅಂಚೆ ಇಲಾಖೆಯ ಸುದೀಪ್ ಕುಮಾರ್, ಕಡಬ ತಾ.ಪಂ ಉದ್ಯೋಗ ಖಾತ್ರಿಯ ಭರತ್ ರಾಜ್, ಅರಣ್ಯ ಇಲಾಖೆಯ ಪ್ರಕಾಶ್ ಅಗಸಿಮನಿ, ಆರೋಗ್ಯ ಇಲಾಖೆಯ ಬಸವರಾಜ್, ಕಂದಾಯ ಇಲಾಖೆಯ ರಂಜನ್ ಕಲ್ಕುದಿ, ಶಿಶು ಅಭಿವೃದ್ಧಿ ಇಲಾಖೆಯ ವಿಜಯ, ಪಶು ಇಲಾಖೆಯ ಡಾ.ಮಲ್ಲಿಕಾ, ತೋಟಗಾರಿಕಾ ಇಲಾಖೆಯ ಮಧುಶ್ರೀ, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾ ಮಾಹಿತಿ ನೀಡಿದರು.
ಎರಡು ವರ್ಷಗಳ ಹಿಂದೆ ನವಗ್ರಾಮಕ್ಕೆ ಇಟ್ಟ ಅನುದಾನದ ಕೆಲಸ ಆಗಿಲ್ಲ ಯಾಕೆ.: ರಾಜೇಶ್ ಎನ್ ಎಸ್
ಕೋವಿಡ್ ಲಸಿಕೆ ನೀಡಲು ಎಸ್ ಎಸ್ ಪಿ ಯು ಕಾಲೇಜಿನವರು ನವರು ಪೋಷಕರಿಗೆ ನೊಟೀಸ್ ನೀಡಿದ್ದು ಲಸಿಕೆಯಿಂದ ಮಕ್ಕಳಿಗೆ ತೊಂದರೆ ಆದರೆ ನೀವೇ ಜವಾಬ್ದಾರರು ಎಂದು ತಿಳಿಸಿದ್ದಾರೆ, ಇದು ಯಾಕೆ ಹೀಗೆ, ಇದು ಸರಿಯಾ : ಸತೀಶ್ ಕೂಜುಗೋಡು
ವಾಲಗದಕೇರಿಯಲ್ಲಿ ಬಚ್ಚಲು ಗುಂಡಿ ಮಾಡಿಸಲು ರೆಕಾರ್ಡ್ ಸಮಸ್ಯೆ ಇದೆ. ಬೇರೆ ವ್ಯವಸ್ಥೆ ಮಾಡಿ ಬಚ್ಚಲು ಗುಂಡಿ ನಿರ್ಮಿಸಲು ಅವಕಾಶ ಇದ್ಯಾ. : ಭಾರತಿ ದಿನೇಶ್
ಗುರುವಾರ ಹುಟ್ಟಿದ ಹೆಣ್ಣು ಮಗುವಿಗೆ ಮಾತ್ರಾ 1000 ಯಾಕೆ. : ಶಿವರಾಮ ರೈ
ಏನೆಕಲ್ಲುವಿನಲ್ಲಿ ನದಿಗೆ ಕೆಬ್ಬೋಡಿಯಲ್ಲಿ ವೆಂಟೆಂಡ್ ಡ್ಯಾಂ ನಿರ್ಮಿಸಿ, ತುಂಬಾ ಜನರಿಗೆ ಪ್ರಯೋಜನವಾದಿತು. : ಅಚ್ಚುತ ಸುಬ್ರಹ್ಮಣ್ಯ
ಇಲ್ಲಿಂದ ಮರಳು ಕದ್ದು ಮಾರುತ್ತಾರೆ. ಆದ್ರೆ ಇಲ್ಲಿನ ಬಡವರಿಗೆ ಮರಳು ಸಿಗುತ್ತಿಲ್ಲ.: ಲಕ್ಷ್ಮೀ ಸುಬ್ರಹ್ಮಣ್ಯ
ರಾತ್ರಿ 12 ಗಂಟೆ ಬಳಿಕ ಮರಳು ತೆಗೆಯುತ್ತಾರೆ. ಯಾರೂ ಕೇಳುವವರಿಲ್ಲ.: ನಾರಾಯಣ ಅಗ್ರಹಾರ