ಕಳಂಜ ಗ್ರಾಮದ ವಿಷ್ಣು ನಗರ ಜನತಾ ಗ್ರಹ ಕಾಲೋನಿ ಪರಿಸರದಲ್ಲಿ ಕಳೆದ ಹಲವಾರು ತಿಂಗಳುಗಳಿಂದ ಬೀದಿನಾಯಿಗಳ ಕಾಟ ಹೆಚ್ಚಾಗಿದೆ. ಸಣ್ಣ ಪುಟ್ಟ ಮಕ್ಕಳನ್ನು ಈ ಪರಿಸರದಿಂದ ಶಾಲೆಗೆ ಕಳುಹಿಸಲು ಪೋಷಕರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದವರ ಗಮನಕ್ಕೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನ ಬರುವುದಿಲ್ಲವೆಂದು ಸಾರ್ವಜನಿಕರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ಕಡೆಗಳಲ್ಲಿ ಬೀದಿನಾಯಿಗಳು ಸಣ್ಣ ಪುಟ್ಟ ಕಂದಮ್ಮಗಳ ಮೇಲೆರಗಿ ಜೀವಕ್ಕೆ ಅಪಾಯ ತಂದ ಘಟನೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುತ್ತದೆ.
ಇದೀಗ ಬೀದಿಗಳಲ್ಲಿ ನಾಯಿಗಳು ಹೆಚ್ಚಾಗುತ್ತಿದ್ದು ಕಳಂಜ ಗ್ರಾಮ ಪರಿಸರದ ನಿವಾಸಿಗಳು ಆತಂಕದಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.