ಮೋದಿಯವರನ್ನು ಪ್ರಧಾನಿ ಮಾಡಿದ ಹಿಂದುಳಿದ ವರ್ಗದವರು
ಅಂತ ಸಮಾಜದ ಗುರುಗಳಿಗೆ ಕೇಂದ್ರ ಸರಕಾರದಿಂದ ಅವಮಾನ : ಜೆ.ಪಿ.ರೈ
ಸಮಾನತೆಯ ಹರಿಕಾರ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ದೆಹಲಿ ಗಣರಾಜ್ಯೋತ್ಸವ ಪರೆಡ್ ನಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಿದ ಕೆಂದ್ರ ಸರಕಾರದ ನಡೆಯನ್ನು ಖಂಡಿಸಿರುವ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಸಾಕೇಂತಿಕ ಪ್ರತಿಭಟನೆ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ “ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿದ ಹಿಂದುಳಿದ ವರ್ಗದವರು ಅಂತ ಸಮಾಜದ ಗುರುಗಳಿಗೆ ಕೇಂದ್ರ ಸರಕಾರದಿಂದ ಅವಮಾನ ಮಾಡಿರುವುದು ಖಂಡನೀಯ. ಈಗ ಮೋದಿ ಸರಕಾರದ ಬಣ್ಣ ಬಯಲಾಗಿದೆ. ಹಿಂದುಗಳಲ್ಲಿ ಕೂಡಾ ಹಿಂದುಳಿದವರಿದ್ದಾರೆಂದು ಮೋದಿ ತೊರಿಸಿಕೊಟ್ಟಿದ್ದಾರೆ. ನಾರಾಯಣ ಗುರುಗಳ ಸ್ತಬ್ಧ ಚಿತ್ರದ ಬದಲು ಶಂಕರಾಚಾರ್ಯರನ್ನು ಕೊಡಿ ಎಂದು ಕೇಳಿ ಮೇಲ್ವರ್ಗದ ಒಲೈಕೆ ಕೇಂದ್ರ ಮಾಡಿದೆ” ಎಂದು ಹೇಳಿದರು. “ಬಿಜೆಪಿ- ಸಂಘ ಪರಿವಾರದದಲ್ಲಿ ಹೋರಾಟ ಮಾಡಿ ಕೇಸುಗಳನ್ನು ಹಾಕಿಕೊಂಡಿರುವಂತಹ ಹಿಂದುಳಿದ ಜನಾಂಗವನ್ನು ಹೊರಗೆ ಹಾಕುವ ಕೆಲಸ ಸರಕಾರ ಮಾಡಿದೆ. ಈ ವಿಚಾರ ಹಿಂದುಳಿದ ವರ್ಗದವರಿಗೂ ಈಗ ಗೊತ್ತಾಗಿದೆ. ಮೋದಿಯವರನ್ನು ಪ್ರಧಾನಿ ಮಾಡಿದ್ದೆ ಹಿಂದುಳಿದ ಸಮಾಜದವರು ಎಂದು ಹೇಳಿದರು.
ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ, “ನಾರಾಯಣ ಗುರುಗಳು ಮಾನವತವಾದಿಯಾಗಿ ಸಮಾಜ ಸುಧಾಕರಣೆಗೊಳಿಸಿದವರು. ಅಸ್ಪಶ್ಯರಿಗೆ ದೇವಸ್ಥಾನಕ್ಕೆ ಹೋಗಲು ಅವಕಾಶ ಇಲ್ಲದಂತಹ ಸಂದರ್ಭದಲ್ಲಿ ದೇವಸ್ಥಾನವನ್ನು ಕಟ್ಟಿ ಅವರು ದೇವಸ್ಥಾನಕ್ಕೆ ಹೋಗುವಂತೆ ಮಾಡಿ ಅಸಮಾನತೆಯನ್ನು ಹೋಗಲಾಡಿಸಿದ ವ್ಯಕ್ತಿ. ಅಂತಹ ವ್ಯಕ್ತಿ ಇಂದು ಅವಮಾನಕ್ಕೊಳಗಾಗಿದ್ದಾರೆ. ಸಂವಿಧಾನ ರಚನೆಯ ಸಂದರ್ಭ ಅಂಬೇಡ್ಕರರಿಗೆ ಈ ಗುರುಗಳ ತತ್ವ ಆದರ್ಶಗಳು, ಗಾಂಧೀಜಿಯವರ ಹೋರಾಟಕ್ಕೂ ಇವರೇ ಪ್ರೇರಣೆ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಇಂತ ವ್ಯಕ್ತಿಯ ಸ್ತಬ್ಧ ಚಿತ್ರವನ್ನು ಸ್ವೀಕರಿಸದೇ ಕೇಂದ್ರ ಸರಕಾರ ತಿರಸ್ಕರಿಸಿರುವುದು ಖಂಡನೀಯ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್ ಸ್ವಾಗತಿಸಿದರು. ನ.ಪಂ. ಮಾಜಿ ಸದಸ್ಯ ಕೆ.ಎಂ. ಮುಸ್ತಫ ವಂದಿಸಿದರು. ಕಾಂಗ್ರೆಸ್ ಪ್ರಮುಖರಾದ ಎಸ್ ಸಂಶುದ್ದಿನ್, ಪಿ.ಎ.ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಶಾಫಿ ಕುತ್ತಮೊಟ್ಟೆ, ಸುರೇಶ್ ಅಮೈ, ಶಶಿಧರ್ ಎಂ ಜೆ, ಗೋಕುಲ್ ದಾಸ್ ಕೆ, ಅಶೋಕ್ ಚೂಂತಾರು, ನಂದರಾಜ್ ಸಂಕೇಶ್, ಭವಾನಿಶಂಕರ್ ಕಲ್ಮಡ್ಕ, ಪರಮೇಶ್ವರ ಕೆಂಬಾರೆ, ದಿನೇಶ್ ಅಂಬೇಕಲ್ಲು, ಅನಿಲ್ ರೈ ಪುಡ್ಕಜೆ, ಸತ್ಯಕುಮಾರ್ ಆಡಿಂಜಾ, ಶ್ರೀಲತಾ ಪ್ರಸನ್ನ, ಪದ್ಮನಾಭ ಬೀರಮಂಗಳ, ಮುನೀರ್ ಬೆಳ್ಳಾರೆ, ಹರೀಶ್ ಬೆಳ್ಳಾರೆ, ಚಂದ್ರನ್ ಕೂಟೆಲು, ಉಬೈಸ್, ಗೀತಾ ಕೋಲ್ಚಾರ್, ಪರಮೇಶ್ವರ್ ಚಣಿಲ, ಮಂಜುನಾಥ್ ಮಡ್ತಿಲ, ಕೀರ್ತನ್ ಕೊಡಪಾಲ, ಸಿದ್ದಿಕ್ ಕೊಕ್ಕೊ, ಗಂಗಾಧರ ಮೇನಾಲ ಉಪಸ್ಥಿತರಿದ್ದರು