ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಪ್ರತಿಷ್ಟಾ ವಾರ್ಷಿಕೋತ್ಸವ ಮತ್ತು ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ. 11 ರಿಂದ ಫೆ. 14ರ ತನಕ ಜರಗಲಿದ್ದು, ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಸನ್ನಿಧಿಯಲ್ಲಿ ಜ. 26ರಂದು ಬಿಡುಗಡೆಗೊಳಿಸಲಾಯಿತು.
ಶ್ರೀದೇವಳದ ಧರ್ಮದರ್ಶಿ ಕಾಂಚೋಡು ಪರಮೇಶ್ವರಯ್ಯ, ಆಡಳಿತ ಮಂಡಳಿ ಉಪಾಧ್ಯಕ್ಷ ಜೆ.ನಾರಾಯಣ ಭಟ್ಟ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ಮುಪ್ಪೇರ್ಯ, ಕೋಶಾಧಿಕಾರಿ ಲೋಕೇಶ್ ಬೆಳ್ಳಿಗೆ, ಜಾತ್ರೋತ್ಸವ ಸಮಿತಿ ಪೂರ್ವಾಧ್ಯಕ್ಷ ರವೀಂದ್ರ ರೈ ಟಪ್ಪಾಲುಕಟ್ಟೆ , ರಾಧಾಕೃಷ್ಣ ಕೊಳೆಂಜಿಕೋಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಾಳಿಲ ಹಾಗೂ ಮುಪ್ಪೇರ್ಯ ಗ್ರಾಮಗಳ ಭಕ್ತಾದಿಗಳ ಮನೆಗಳಿಗೆ ಜಾತ್ರೋತ್ಸವದ ಆಮಂತ್ರಣವನ್ನು ಸಮರ್ಕವಾಗಿ ವಿತರಿಸುವ ಸಲುವಾಗಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರ ಸಲಹೆಯಂತೆ ತಂಡಗಳನ್ನು ರಚಿಸಲಾಯಿತು. ಜಾತ್ರೋತ್ಸವದ ಯಶಸ್ವೀ ನಿರ್ವಹಣೆಗೆ ಭಕ್ತರು ತನುಮನಧನ ಸಹಕಾರವನ್ನು ನೀಡಬೇಕೆಂದು ಶ್ರೀದೇವಳದ ಧರ್ಮದರ್ಶಿಗಳು, ಆಡಳಿತಮಂಡಳಿ ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷರು ಸಭೆಯಲ್ಲಿ ವಿನಂತಿಸಿದರು.