ಸುಳ್ಯ ತಾಲೂಕು ಪಿಂಚಣಿದಾರರ ಸಂಘದ ವತಿಯಿಂದ ಕಲ್ಲುಗದ್ದೆ ಶೇಷಪ್ಪ ಮಾಸ್ತರ್ರವರಿಗೆ ಸನ್ಮಾನ ಕಾರ್ಯಕ್ರಮ ಜ. 26 ರಂದು ನಡೆಯಿತು. ಸಂಘದ ಅಧ್ಯಕ್ಷ ಡಾ. ರಂಗಯ್ಯ , ಉಪಾಧ್ಯಕ್ಷರಾದ ಅರಂತೋಡು ಎನ್ಎಂಪಿಯು ವಿಶ್ರಾಂತ ಪ್ರಾಂಶುಪಾಲರಾದ ಕೆ.ರಮಾ ಹಾಗೂ ನಿವೃತ್ತ ಉಪನ್ಯಾಸಕ ಎ. ಅಬ್ದುಲ್ಲ, ಜತೆ ಕಾರ್ಯದರ್ಶಿ ಮಡಪ್ಪಾಡಿ ಮಾಧವ ಮಾಸ್ತರ್, ಕೋಶಾಧಿಕಾರಿ ನಿವೃತ್ತ ಆರೋಗ್ಯಾಧಿಕಾರಿ ಸುಬ್ರಹ್ಮಣ್ಯ ಹೊಳ್ಳ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜ್ಯಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕಿ ಕಮಲಾಕ್ಷಿಯವರು, ತಾಲೂಕಿನ ಅತ್ಯಂತ ಹಿರಿಯ ನಿವೃತ್ತ ಶಿಕ್ಷಕ, 97 ವರ್ಷ ಪ್ರಾಯದ ಕಲ್ಲುಗದ್ದೆ ಶೇಷಪ್ಪ ಮಾಸ್ತರ್ರವರ ಮನೆಗೆ ತೆರಳಿ ಗುರುವಂದನೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅವರ ಮನೆಯ ಸದಸ್ಯರು ಉಪಸ್ಥಿತರಿದ್ದರು.