ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ. ಸಿ ಟ್ರಸ್ಟ್ ಇದರ ಸಹಯೋಗದೊಂದಿಗೆ ಗ್ರಾಮ ಮಟ್ಟದಲ್ಲಿ ಜನ ಸಾಮಾನ್ಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ಸುಲಭ ರೀತಿಯಲ್ಲಿ ಪಡೆಯಲು ಡಿಜಿಟಲ್ ಸೇವಾ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು.
ಇದು ಸುಳ್ಯ ತಾಲೂಕಿನಲ್ಲಿ ಪ್ರಥಮವಾಗಿ ಬೆಳ್ಳಾರೆ ವಲಯದ ಪೆರುವಾಜೆಯಲ್ಲಿ ಡಿಜಿಟಲ್ ಸೇವಾಕೇಂದ್ರ ಆರಂಭವಾಗಿದ್ದು, ಇದರ ಉದ್ಘಾಟನೆಯನ್ನು ಜನಜಾಗ್ರತಿ ವೇದಿಕೆ ಸದಸ್ಯ ಹಾಗೂ ಪೆರುವಾಜೆ ಪಂಚಾಯತಿನ ಮಾಜಿ ಉಪಾಧ್ಯಕ್ಷರಾದ ಸುನಿಲ್ ಕುಮಾರ್ ರೈ ಉದ್ಘಾಟಿಸಿದರು. ತಾಲೂಕಿನ ಯೋಜನಾಧಿಕಾರಿ ಚೆನ್ನಕೇಶವ ಸೇವಾ ಕೇಂದ್ರದ ಕಾರ್ಯ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಲಾದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ, ಒಕ್ಕೂಟ ಅಧ್ಯಕ್ಷರಾದ ಹೊನ್ನಪ್ಪ, ತಾಲೂಕಿನ ಹಣ ಕಾಸು ಪ್ರಬಂಧಕರಾದ ಆತೀಶ್, ಸಿ.ಎಸ್.ಸಿ. ನೋಡಲ್ ಅಧಿಕಾರಿ ಪ್ರಶಾಂತ್, ವಿ.ಎಲ್.ಇ. ಶ್ರೀಮತಿ ಸ್ವಾತಿ ಪ್ರಕಾಶ್, ಸೇವಾಪ್ರತಿನಿಧಿ ಶ್ರೀಮತಿ ಯಶೋಧ, ಪಂಚಾಯತ್ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ನಗದು ಸಂಗ್ರಹಕಾರದ ಗಾಯತ್ರಿ ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ವಸಂತ್ ಎಲ್ ಕಾರ್ಯಕ್ರಮ ನಿರೂಪಿಸಿ, ಸೇವಾಪ್ರತಿನಿಧಿ ಯಶೋದಾ ವಂದಿಸಿದರು.