ಎಸ್.ಎಸ್.ಎಫ್ ಮಂಡೆಕೋಲು ಶಾಖೆಯ ವಾರ್ಷಿಕ ಕೌನ್ಸಿಲ್ ನಿನ್ನೆ ಬೆಳಗ್ಗೆ ಏಳು ಗಂಟೆಗೆ ಸರಿಯಾಗಿ ತೈವಳಪ್ಪಿನಲ್ಲಿ ಜರುಗಿತು. ಅಧ್ಯಕ್ಷತೆಯನ್ನು ಸೆಕ್ಟರ್ ನಾಯಕರಾದ ಸಿದ್ದಿಕ್ ಹಿಮಮಿ ವಹಿಸಿದರು. ಸಿದ್ದಿಕ್ ಉಸ್ತಾದ್ ದುಆ ನಂತರ ಹಮೀದ್ ಮುಸ್ಲಿಯಾರ್ ತೈವಳಪ್ಪು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಕಾರ್ಯದರ್ಶಿ ಅಶ್ರಫ್ ಮಂಡೆಕೋಲು ಸ್ವಾಗತಿಸಿದರು. ಸಿದ್ದಿಕ್ ಹಿಮಮಿ ಅಧ್ಯಕ್ಷ ಭಾಷಣ ಬಳಿಕ ಸೆಕ್ಟರ್ ಕಾರ್ಯದರ್ಶಿ ಕಬೀರ್ ಹಿಮಮಿ ಶುಭನುಡಿದರು. ನಂತರ ಕಾರ್ಯದರ್ಶಿ ವಾರ್ಷಿಕ ವರದಿಯನ್ನು ಕೋಶಾಧಿಕಾರಿ ವಾಚಿಸಿ ಅಂಗೀಕಾರ ಪಡೆದರು. ನಂತರ ಮುಂದಿನ ವರ್ಷಕ್ಕೆ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಆಶ್ರಫ್ ಮಂಡೆಕೋಲು, ಕಾರ್ಯದರ್ಶಿಯಾಗಿ ಅಬ್ದುಲ್ ರಹೀಂ ಹಿಮಮಿ ಹಾಗೂ ಅಲೀ ಗುರುವಮೂಟ್ಟೆ ಕೋಶಾಧಿಕಾರಿಯಾಗಿ ನೇಮಕಗೊಂಡರು. ನಂತರ ನೂತನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮಾತನಾಡಿ ಭವಿಷ್ಯದಲ್ಲಿ ಮಾಡಬೇಕಾದ ಬದಲಾವಣೆಗಳ ಕುರಿತು ಚರ್ಚೆಗಳು ನಡೆಸಿದರು. ಕೆ.ಸಿ.ಎಫ್ ನಾಯಕರಾದ ಹಾರಿಸ್ ಮಂಡೆಕೋಲು ಸಭೆಗೆ ಹಿತನುಡಿದರು.
ಕೆ.ಸಿ.ಎಫ್ ನಾಯಕರಾದ ಹಮೀದ್ ಮುಸ್ಲಿಯಾರ್ ಮಾರ್ಗ, ಹಾರಿಸ್ ಗುರುವಮೊಟ್ಟೆ, ರಫೀಕ್ ಬಳ್ಳಕಜೆ, ಉಮ್ಮರ್ ಮಂಡೆಕೋಲು, ಫಾರೂಕ್ ಗುರುವಮೊಟ್ಟೆ, ಬಾತಿಶ್ ಗುರುವಮೊಟ್ಟೆ ಉಪಸ್ಥಿತಿಯಿದ್ದರು.
ನೌಶಾದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.