ಹಾವುಗಳನ್ನು ಹಿಡಿಯುವ ಸಾಹಸಿ ಬೆಳ್ಳಾರೆಯ ಅಝರುದ್ದೀನ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಮನೆ ಸುತ್ತ ಮುತ್ತ ನೀರು, ಆಹಾರ ಅರಸುತ್ತಾ ಬರುವ ಹಾವುಗಳನ್ನು
ಕಂಡರೆ ಬಡಿಗೆಯಲ್ಲಿ ಬಡಿಯುವ ಮಂದಿಯೇ ಹೆಚ್ಚು. ಈ ನಡುವೆ ಬೆಳ್ಳಾರೆಯ ಯುವಕನೋರ್ವ ಉರಗಗಳನ್ನು ಕಂಡರೆ ರಕ್ಷಣೆಗೆ ಓಡೋಡಿ ಬರುತ್ತಾರೆ. ವಿಷಕಾರಿಯಾದ ಹಲವಾರು ಬಗೆಯ ಹಾವುಗಳನ್ನು ಜಾಗರೂಕತೆಯಿಂದ ಹಿಡಿದು ಕಾಡುಪ್ರದೇಶಗಳಿಗೆ ಬಿಟ್ಟು ಬರುವ ಬೆಳ್ಳಾರೆಯ ಅಝರುದ್ದೀನ್ ಈ ಭಾಗದಲ್ಲಿ ಸ್ನೇಕ್ ಅಝರ್ ಎಂದೇ ಪ್ರಖ್ಯಾತರಾಗಿದ್ದಾರೆ. ಹಾವುಗಳನ್ನ ರಕ್ಷಣಾತ್ಮಕವಾಗಿ, ಚಾಕಚಕ್ಯತೆಯಿಂದ ಹಿಡಿಯುವದನ್ನು ರೂಢಿ ಮಾಡಿಕೊಂಡಿರುವ ಅಝರುದ್ದೀನ್ ಬೆಳ್ಳಾರೆ ಮಾತ್ರವಲ್ಲದೆ ಹಲವು ಕಡೆಗಳಲ್ಲಿ ವಿವಿಧ ಬಗೆಯ ಹಲವಾರು ವಿಷಪೂರಿತ ಹಾವುಗಳನ್ನು ಹಿಡಿದು ರಕ್ಷಿಸಿ ಮನೆಯ ಮಾಲೀಕರು ನಿಟ್ಟುಸಿರುವ ಬಿಡುವಂತೆ ಮಾಡಿದ್ದಾರೆ. ಮಾತ್ರವಲ್ಲದೆ ಉರಗಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅರಣ್ಯ ಪ್ರದೇಶದಲ್ಲಿ ಬಿಟ್ಟು ಉರಗಸಂತತಿಯನ್ನ ರಕ್ಷಿಸುವ ಪ್ರಯತ್ನವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
24ಗಂಟೆಯೂ ಸೇವೆ
ಮನೆ ಸುತ್ತಮುತ್ತ ಯಾವುದೇ ರೀತಿಯ ಹಾವುಗಳನ್ನ ಕಂಡರೆ ರಾತ್ರಿ ಹಗಲೆನ್ನದೆ ತಕ್ಷಣ ಸ್ಥಳಕ್ಕೆ ತೆರಳಿ ಹಾವನ್ನು ಲೀಲಾಜಾಲವಾಗಿ ಹಿಡಿಯುವ ಕಲೆಯನ್ನು ಅಝರ್ ಕರಗತ ಮಾಡಿಕೊಂಡಿದ್ದಾರೆ. ನಡುರಾತ್ರಿ ಹಾವು ಇದೆ ಎಂದು ಫೋನ್ ಕರೆ ಬಂದರೂ ಎದ್ದು ತಕ್ಷಣ ರಕ್ಷಣೆಗೆ ತೆರಳುತ್ತಾರೆ.
ಸಾಮಾಜಿಕ ಸೇವೆಯಲ್ಲೂ ತೊಡಗಿಕೊಂಡಿರುವ ಈ ಯುವಕ
ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉರಗಗಳನ್ನು ಹಿಡಿಯುವುದರಲ್ಲಿ ತೊಡಗಿಕೊಂಡಿದ್ದಾರೆ.
ಗೆಳೆಯನ್ ಸಾಥ್
ಸಣ್ಣ ಪುಟ್ಟ ಹಾವುಗಳನ್ನು ಹಿಡಿದು ರಕ್ಷಣೆ ಮಾಡುತ್ತಿದ್ದ ಇವರು ತನ್ನ ಗೆಳೆಯ ಹನೀಫ್ ನಿಡ್ಮಾರ್ ಜೊತೆ ಸೇರಿ ದೊಡ್ಡ ಗಾತ್ರದ ಹೆಬ್ಬಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಭಯ ಅಳುಕಿಲ್ಲದೆ ನಿರಾತಂಕವಾಗಿ ವಿಷಕಾರಿಯಾದ ಹಾವುಗಳನ್ನು ಹಿಡಿದು ಜನರಿಗೆ ನೆಮ್ಮದಿ ಹಾಗು ಹಾವಿಗೆ ರಕ್ಷಣೆ ನೀಡುವ ಈ ಯುವಕನ ಕಾರ್ಯಕ್ಕೆ ಭೇಷ್ ಎನ್ನಲೇಬೇಕು.
– ಉಮೇಶ್ ಮಣಿಕ್ಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.