ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಬಾಳುಗೋಡು ಸಂಪರ್ಕ ರಸ್ತೆಯೂ ಕಳೆದ ಹಲವು ವರ್ಷಗಳಿಂದ ತೀರಾ ದುರವಸ್ಥೆಯಲ್ಲಿದೆ ಮಾಜಿ ಶಾಸಕ ರಾಧ ಕೂ ಕೂಜುಗೋಡು ವೆಂಕಟ್ರಮಣ ಗೌಡ ಅವರು ಹುಟ್ಟಿ ಬೆಳೆದ ಊರಾಗಿದೆ. ಈ ಭಾಗದಲ್ಲಿ ಶಾಲೆ ಧಾರ್ಮಿಕ ಕೇಂದ್ರಗಳು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಾಲೋನಿಗಳು ಸೇರಿದಂತೆ ಅನೇಕ ಮಂದಿ ಕೃಷಿಕರು ಈ ಭಾಗದಲ್ಲಿ ವಾಸಿಸುತ್ತಿದ್ದಾರೆ ಇವರೆಲ್ಲರೂ ಕೂಡಪಟ್ಟಣಗಳಿಗೆ ಹೋಗಲು ಇದೇ ಪ್ರಮುಖ ರಸ್ತೆ ಆಗಿರುತ್ತದೆ.
ಈ ರಸ್ತೆಯ ಕೆಲವೊಂದು ಕಡೆಗಳಲ್ಲಿ ಮಳೆಹಾನಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಯಡಿ ಕಾಂಕ್ರೀಟಿಕರಣ ಗೊಳಿಸಲಾಗಿದೆ ಇನ್ನುಳಿದ ಕಡೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಯ ತುಂಬೆಲ್ಲ ಗುಂಡಿಗಳು ನಿರ್ಮಾಣವಾಗಿದ್ದು ಅಲ್ಲದೆ ರಸ್ತೆ ತುಂಬೆಲ್ಲಾ ಜಲ್ಲಿಕಲ್ಲು ಹರಡಿಕೊಂಡಿವೆ ಇದರಿಂದಾಗಿ ದ್ವಿಚಕ್ರ ಸವಾರರಿಗೆ ಅಂತೂ ತುಂಬಾ ಕಷ್ಟಕರವಾಗಿದೆ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಕಳೆದ ಹಲವು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗಳಿಗೆ ರಸ್ತೆ ಅಭಿವೃದ್ಧಿ ಬಗ್ಗೆ ಮನವಿ ಸಲ್ಲಿಸಲಾಗಿದ್ದರೂ ಯಾರೊಬ್ಬರೂ ಕೂಡ ಸ್ಪಂದಿಸದಿರುವ ಬಗ್ಗೆ ಜನರು ತೀರಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟವರು ಗಮನಹರಿಸುವಂತೆ ಭಾಗದ ಜನರು ಒತ್ತಾಯಿಸುತ್ತಿದ್ದಾರೆ.
ವರದಿ ಚಿತ್ರ ಡಿಎಚ್