ಗಣರಾಜ್ಯೋತ್ಸವದ ಪ್ರಯುಕ್ತ ಸುಬ್ರಹ್ಮಣ್ಯದ ಕೆಎಸ್ಎಸ್ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಸಂಘ ಹಾಗೂ ಇಂಟರ್ನಲ್ ಕ್ವಾಲಿಟಿ ಅಶ್ಯರೆನ್ಸ್ ಸೆಲ್ ಇದರ ವತಿಯಿಂದ ಸೂಚನಾ ಫಲಕ ಸ್ಪರ್ಧೆ ನಡೆಯಿತು.
ತೀರ್ಪುಗಾರರಾಗಿ ಸುಭಾಶ್ಚಂದ್ರ ಕಳಂಜ, ಕಾಲೇಜಿನ ಉಪನ್ಯಾಸಕಿ ಸ್ವಾತಿ ಹಾಗೂ ಗ್ರಂಥಾಲಯ ನಿರ್ವಾಹಕಿ ಮತ್ತು ರಾಷ್ಟ್ರೀಯ ಹಬ್ಬಗಳ ಸಂಯೋಜಕಿಯಾದ ಸುನೀತಾ ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ ೮ ತಂಡಗಳು ಭಾಗವಹಿಸಿದ್ದು, ವಿಭಿನ್ನ ಶೈಲಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.