ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಶುಕ್ರವಾರ ಗುಡ್ ಫ್ರೈಡೆ ಹಾಗೂ ಭಾನುವಾರ ಈಸ್ಟರ್ ಆಚರಣೆಯನ್ನು ಆಚರಿಸಲಾಯಿತು.ಸೈಂಟ್ ಬ್ರಿಜಿಡ್ಸ್ ಶಾಲೆಯಿಂದ ಚರ್ಚ್ ತನಕ ಮೆರವಣಿಗೆಯಲ್ಲಿ ಗರಿಗಳನ್ನು ಹಿಡಿದು ಯೇಸುವಿನ ಶಿಲುಬೆಯನ್ನು ಹಿಡಿದು ಅಂದು ಜೆರುಸಲೇಂ ಗೆ ಸ್ವಾಗತಿಸಿದ ಘಟನೆಯನ್ನು ನೆನಪಿಸಲಾಯಿತು.
ಗುರುವಾರ ಯೇಸುವಿನ ಕೊನೆಯ ಭೋಜನ ದಿನವನ್ನು ಆಚರಿಸಲಾಯಿತು.
ಚರ್ಚ್ ನಲ್ಲಿ ವಿದಿ ವಿಧಾನ ಕಾರ್ಯ ಹಾಗೂ ಬಲಿ ಪೂಜೆ ನಡೆಯಿತು. ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಧರ್ಮ ಗುರುಗಳಾದ ರೆ.ಫಾ. ವಿಕ್ಟರ್ ಡಿಸೋಜ, ರೆ.ಫಾ. ವಿನ್ಸೆಂಟ್ ಡಿಸೋಜ, ರೆ.ಫಾ.ಓಸ್ವಲ್ಡ್ ಲಸ್ರಾದೊ ಉಪಸ್ಥಿತರಿದ್ದರು.
ಶನಿವಾರ ಸಂಜೆ ಬೆಂಕಿಯಿಂದ ಬೆಳಕನ್ನು ಪಡೆಯುವುದರ ಮೂಲಕ ಈಸ್ಟರ್ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಹೊಸ ಪವಿತ್ರ ನೀರನ್ನು ಶುದ್ದೀಕರಿಸಲಾಯಿತು ನಂತರ ಬಲಿಪೂಜೆ ಅರ್ಪಸಲಾಯಿತು.
ಎಲ್ಲರೂ ಮೊಂಬತ್ತಿ ಹಿಡಿದು ಕೊಂಡು ತಮ್ಮ ಜ್ಞಾನ ಸ್ನಾನದ ಪ್ರಮಾಣವನ್ನು ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಐ ಸಿ ವೈ ಎಂ ಸದಸ್ಯರಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.