ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾಲೋಚನಾ ಸಭೆ, ಬೆಂಬಲ ಘೋಷಣೆ, ಪ್ರತಿಜ್ಞೆ ಸ್ವೀಕಾರ
ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ದ.ಕ. ಜಿಲ್ಲಾ ಆಡಳಿತದ ಸಹಯೋಗದೊಂದಿಗೆ ಸುದ್ದಿ ಜನಾಂದೋಲನ ವೇದಿಕೆ, ಜನಪ್ರತಿನಿಧಿಗಳ ಮತ್ತು ಸಂಘದ ಸಂಸ್ಥೆಯ ಸಹಕಾರದೊಂದಿಗೆ ಸುಳ್ಯ ತಾಲೂಕಿನ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಕಾನೂನು ಮಾಹಿತಿ ಹಾಗೂ ಲಂಚ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಅಧಿಕಾರಿಗಳ ಮತ್ತು ಜನರ ಜವಾಬ್ದಾರಿಯ ಕುರಿತು ಮಾಹಿತಿ ಕಾರ್ಯಾಗಾರ, ಅಧಿಕಾರಿಗಳೊಂದಿಗೆ ಸಂವಹನ ಕಾರ್ಯಕ್ರಮವು ಎ.22ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಜರುಗಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸುಳ್ಯ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಮಾಲೋಚನಾ ಸಭೆಯು ಇಂದು ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿರುವ ಸುದ್ದಿ ಬಿಡುಗಡೆ ಪತ್ರಿಕಾ ಕಛೇರಿಯಲ್ಲಿ ನಡೆಯಿತು.
ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಯ ಆಡಳಿತ ನಿರ್ದೇಶಕ, ಸುದ್ದಿ ಜನಾಂದೋಲನ ವೇದಿಕೆ ಸಂಚಾಲಕ ಡಾ. ಯು.ಪಿ.ಶಿವಾನಂದರು ಅಧ್ಯಕ್ಷತೆ ವಹಿಸಿದ್ದರು.
ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಲಂಚ ಭ್ರಷ್ಟಾಚಾರ ವಿರೋಧಿ ಸುದ್ದಿ ಜನಾಂದೋಲನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಸೇರಿದವರು ಲಂಚ ಭ್ರಷ್ಟಾಚಾರ ವಿರೋಧಿ ಘೋಷಣೆ ಮತ್ತು ಪ್ರತಿಜ್ಞೆ ಸ್ವೀಕರಿಸಿದರು.ಸಭೆಯಲ್ಲಿ ಭಾಗವಹಿಸಿದವರು ಎ. 22 ರ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದರು.
ಸಮಾಲೋಚನಾ ಸಭೆಯಲ್ಲಿ ಸ್ನೇಹ ಸಂಗಮ ಅಟೋಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ, ಅಮರ ಸುಳ್ಯ ಲಾರಿ ಗೂಡ್ಸ್ ವಾಹನ ಚಾಲಕರ ಸಂಘದ ಕಾರ್ಯದರ್ಶಿ ನಜೀರ್ ಶಾಂತಿನಗರ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ ಮೇಸ್ತ್ರಿ ಜಯನಗರ, ಟೈಲರ್ ಅಸೋಸಿಯೇಷನ್ ಅಧ್ಯಕ್ಷ ದಿವಾಕರ ಟೈಲರ್ ತೋಟಪ್ಪಾಡಿ, ಟೈಲರ್ ಅಸೋಸಿಯೇಷನ್ ನಗರ ಅಧ್ಯಕ್ಷ ಕುಸುಮಾಧರ ರೈ ಬೂಡು, ಜೇಸಿ ಸುಳ್ಯ ಸಿಟಿ ಅಧ್ಯಕ್ಷ ಬಶೀರ್ ಯು.ಪಿ., ಪಯಸ್ವಿನಿ ಜೇಸಿ ನಿಕಟಪೂರ್ವ ಅಧ್ಯಕ್ಷ ಗುರುರಾಜ್ ಅಜ್ಜಾವರ, ಲಯನ್ಸ್ ಕ್ಲಬ್ ಕೋಶಾಧಿಕಾರಿ ರಾಮಚಂದ್ರ ಎಂ, ಶರತ್ ಕುಮಾರ್ ಭಸ್ಮಡ್ಕ, ಲಿಖಿತ್ ಖಂಡಿಗೆಮೂಲೆ, ರವಿ ಜಾಲ್ಸೂರು, ಚಂದ್ರಶೇಖರ ಮರ್ಕಂಜ, ಶ್ರೀಮತಿ ಸುನಿತ ರಾಮಚಂದ್ರ, ಜನಾರ್ದನ ದೋಳ, ಮಲ್ಲೇಶ್ ಬೆಟ್ಟಂಪಾಡಿ ಉಪಸ್ಥಿತರಿದ್ದರು.