ಬೆಳ್ಳಾರೆ ಪೊಲೀಸ್ ಠಾಣೆಗೆ ಕ್ರೈಂ ವಿಭಾಗಕ್ಕೆ ನೂತನ ಎಸ್.ಐ .ಆಗಿ ಆನಂದ ಎಂಬವರ ನೇಮಕವಾಗಿದ್ದು ಎ.17 ರಂದು ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಠಾಣಾ ಎಸ್.ಐ. ರುಕ್ಮ ನಾಯ್ಕ್ ಮತ್ತು ಸಿಬ್ಬಂದಿ ವರ್ಗದವರು ಆನಂದರವರನ್ನು ಸ್ವಾಗತಿಸಿದರು.
ಸುಳ್ಯ ಪೊಲೀಸ್ ಠಾಣೆಯಲ್ಲಿ ಒಂದು ವರ್ಷದಿಂದ ಪ್ರೊಬೇಷನರಿ ಎಸ್.ಐ.ಆಗಿ ಕರ್ತವ್ಯದಲ್ಲಿದ್ದ ಇವರಿಗೆ ಎಸ್.ಐ.ಆಗಿ ಬೆಳ್ಳಾರೆ ಠಾಣೆಗೆ ವರ್ಗಾವಣೆಯಾಗಿದೆ.
ಇವರು ಮೈಸೂರಿನವರಾಗಿದ್ದು ಇವರ ಪತ್ನಿ ಶ್ರೀಮತಿ ಗಾಯತ್ರಿ ಗೃಹಿಣಿಯಾಗಿದ್ದಾರೆ.