ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಹಾಗೂ ಬಾಲಕ ಮತ್ತು ಬಾಲಕಿಯರ ಡಬಲ್ಸ್ ಶೆಟಲ್ ಬ್ಯಾಡ್ ಮಿಂಟನ್ ಪಂದ್ಯಾಟ ಉತ್ಕರ್ಷ ಸಹಕಾರ ಟ್ರೋಫಿ-2022 ಮತ್ತು ‘ಸಹಕಾರ ರತ್ನ’ಪ್ರಶಸ್ತಿ ಪುರಸ್ಕೃತರಾದ ಕೆ. ಸೀತಾರಾಮ ರೈ ಸವಣೂರು ಅವರಿಗೆ ಅಭಿನಂದನಾ ಸಮಾರಂಭವು ಮೇ.1ರಂದು ಪಂಜ ಉತ್ಕರ್ಷ ಸಹಕಾರ ಸೌಧ ವಠಾರದಲ್ಲಿ ಜರುಗಲಿದೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪಂಜ ಪ್ರಾಥಮಿಕ ಸಂಘದಲ್ಲಿಎ.16 ರಂದು ಜರುಗಿತು.ಆಮಂತ್ರಣ ಪತ್ರಿಕೆಯನ್ನು ರಾಜ್ಯಪ್ರಶಸ್ತಿ ವಿಜೇತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಾಗೂ ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿಯ ಕ್ರೀಡಾ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ ನಾಯರ್ ಕೆರೆ ಸಭಾಧ್ಯಕ್ಷತೆ ವಹಿಸಿ ಶುಭಹಾರೈಸಿದರು.ಪ್ರಗತಿ ಪರ ಕೃಷಿಕ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ಸೋಮಶೇಖರ ನೇರಳ,ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಉಪ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಎಣ್ಣೆಮಜಲು ಸ್ವಾಗತಿಸಿದರು. ಅಜಿತ್ ಬಳ್ಪ ವಂದಿಸಿದರು.