ಸಮಾಜ ಸೇವಕ ವಿದೇಶದಲ್ಲಿ ಉದ್ಯೋಗದಲ್ಲಿರುವ ಮುಸ್ತಫ ಅಂಜಿಕಾರ್ ಅವರ ವತಿಯಿಂದ ಪವಿತ್ರ ರಮ್ಜಾನ್ ತಿಂಗಳ ಹಿನ್ನೆಲೆಯಲ್ಲಿ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮ ಇಂದು ಜಯನಗರ ನಿವಾಸದಲ್ಲಿ ನಡೆಯಿತು.ಅಸ್ಸಯ್ಯದ್ ಜೈನುಲ್ ಅಬಿದಿನ್ ತಂಗಳ್ ದುವಾ ನೆರವೇರಿಸಿದರು.
ಸುಮಾರು 50ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಿಟ್ ವಿತರಣೆ ನಡೆಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ ಮಾತನಾಡಿ ಮುಸ್ತಫ ಅಂಜಿಕಾರ್ ರವರು ವರ್ಷಂ ಪ್ರತಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಸ್ಥಳೀಯರ ಸಹಕಾರದಿಂದ ಈ ರೀತಿಯ ಸಮಾಜ ಸೇವೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರು ಕೇವಲ ಧಾರ್ಮಿಕ ಕೇಂದ್ರಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ, ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಹಾಯ ಹಸ್ತವನ್ನು ಚಾಚುವ ಮೂಲಕ ಮಾದರಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಆರ್ ಬಿ ಬಶೀರ್ ಪೈಚಾರು, ಶಾಂತಿನಗರ ಸರ್ಕಾರಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಜೀರ್ ಶಾಂತಿನಗರ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಹಿರಿಯರಾದ ಇಬ್ರಾಹಿಂ ಕೊಕ್ಕೋ, ಗಾಂಧಿನಗರ ಉದ್ಯಮಿ ಅಬ್ದುಲ್ ರಜಾಕ್ ಕರಾವಳಿ, ಜಯನಗರ ಮಸ್ಜಿದ್ ಅಂಡ್ ಮದ್ರಸ ಕಮಿಟಿಯ ಮಾಜಿ ಅಧ್ಯಕ್ಷರುಗಳಾದ ಹಾಜಿ ಅಬ್ದುಲ್ಲಾ, ಡಿ ಎಂ ಅಬೂಬಕ್ಕರ್, ಮುಸ್ತಫಾ ರವರ ಪುತ್ರರಾದ ಮಿನ್ಹಾಜ್, ಮಿಸ್ಬಾ, ಸ್ಥಳೀಯರಾದ ನವಾಜ್ ಪಂಡಿತ್ ಜಯನಗರ, ಆಶಿಫ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.