ವರ್ಷಿಣಿ ಯೋಗ ಎಜುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಹಾಗೂ ಆಯುಷ್ ಮತ್ತು ಯೂತ್ ಸರ್ವಿಸ್ ಇವರು ಗೋವಾದಲ್ಲಿ ಆಯೋಜಿಸಿದ್ದ 8 ನೇ ರಾಷ್ಟ್ರಿಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯದ ವಿದ್ಯಾರ್ಥಿನಿ ಸಾನ್ವಿ ದೊಡ್ಡಮನೆ 11ರಿಂದ 15 ವಯೋಮಿತಿಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಜೂನ್ ನಲ್ಲಿ ಥೈಲ್ಯಾಂಡ್ ನಡೆಯಲಿರುವ ಆಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರಿಂದ ಮಾರ್ಗದರ್ಶನ ಪಡೆದ ಈಕೆ ಕಡಬ ಕ್ನಾನಾಯ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾರೆ. ಕಡಬ ಶ್ರೀ ಮೂಕಾಂಬಿಕಾ ಮಾರುತಿ ಗ್ಯಾರೇಜ್ ನ ಮಾಲಕರಾದ ಶ್ರೀಮತಿ ಸೀತಾಲಕ್ಷ್ಮಿ ಮತ್ತು ನಿತ್ಯಾನಂದ ದೊಡ್ಡಮನೆ ದಂಪತಿಯ ಪುತ್ರ.