ಬಿ. ಯಂ. ಯಸ್. ಸಂಯೋಜಿತ ಆಟೋ ಚಾಲಕರ ಸಂಘ ಸುಳ್ಯ ತಾಲೂಕು ಇದರ ಗುತ್ತಿಗಾರು ಘಟಕದ ವಾರ್ಷಿಕ ಮಹಾಸಭೆಯು ಗಿರಿಜನ ಸಭಾಭವನ ಗುತ್ತಿಗಾರು ಇಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ತಾಲೂಕು ಉಪಾಧ್ಯಕ್ಷ ವಿಜಯ ಕುಮಾರ್ ಉಬರಡ್ಕ , ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ , ನಿರ್ದೇಶಕರುಗಳಾದ ರವಿ ಜಾಲ್ಸೂರು, ಮೋಹನ್ ಚೊಕ್ಕಾಡಿ, ಗುತ್ತಿಗಾರು ಘಟಕದ ಅಧ್ಯಕ್ಷ ಉದಯಕುಮಾರ್ ಹಾಲೆಮಜಲು, ಗೌರವ ಅಧ್ಯಕ್ಷ ಮೋಹನ್ ಮುಕ್ಕೂರ್, ಕೋಶಾಧಿಕಾರಿ ರಾಜ ಉತ್ರಂಬೆ, ಜತೆ ಕಾರ್ಯದರ್ಶಿ ವಸಂತ ಛತ್ರಪ್ಪಾಡಿ, ಉಪಸ್ಥಿತರಿದ್ದರು.
ಸಭೆಯಲ್ಲಿ ಗಿರೀಶ್ ಪಾರೆಪ್ಪಾಡಿ ವಾರ್ಷಿಕ ವರದಿಯನ್ನುವಾಚಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಅಧ್ಯಕ್ಷರಾಗಿ ಧರ್ಮಪಾಲ ಪಂಜಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ತೀರ್ಥರಾಮ ವಾಲ್ತಾಜೆ, ಕೋಶಾಧಿಕಾರಿಯಾಗಿ ಚೇತನ್ ಬಳ್ಳಡ್ಕ, ಉಪಾಧ್ಯಕ್ಷರಾಗಿ ಯತೀಶ್ ಪಾರೆಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಲೋಕೇಶ್ ಪೈಕ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ಕುಕ್ಕುಜೆ ಆಯ್ಕೆಯಾದರು. ಶ್ರೀಮತಿ ದಿವ್ಯಾ ಸುಜನ್ ಗುಡ್ಡೆಮನೆ ಪ್ರಾರ್ಥಿಸಿದರು. ಚಂದ್ರಶೇಖರ ಕಡೋಡಿ ಕಾರ್ಯಕ್ರಮ ನಿರೂಪಿಸಿದರು.