ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ.2 ರಿಂದ ಎ.21 ರವರೆಗೆ ನಡೆಯುತ್ತಿರುವ ನಾದಸಂಕೀರ್ತನೆ ಕಾರ್ಯಕ್ರಮದಲ್ಲಿ ಎ.12ರಂದು ಜನಾರ್ಧನ ಜಯನಗರ ಅವರ ನೇತೃತ್ವದಲ್ಲಿ ಸುಳ್ಯದ ನಾದಪಯಸ್ವಿನಿ ಭಜನಾ ತಂಡದಿಂದ ಭಜನಾ ಸೇವೆ ನಡೆಯಿತು.
ತಂಡದಲ್ಲಿ ಜಯಪ್ರಸಾದ್ ಕೊಯನಾಡು, ವೈಭವ್ ಕುಮಾರ್ ಕೆ., ಯಶ್ವಿನಿ ಬಿ. ಹೊಸಗದ್ದೆ, ಲೋಕೇಶ್ ಸೋಣಂಗೇರಿ, ಚಂದ್ರಶೇಖರ ಪೆರಾಜೆ ಭಾಗವಹಿಸಿದರು. ತಬಲದಲ್ಲಿ ದೀಪ್ತೇಶ್ ಪೈಕ, ಹಾರ್ಮೋನಿಯಂನಲ್ಲಿ ಶಶಿಧರ್ ಎರ್ಮೆಟ್ಟಿ ಸಹಕರಿಸಿದರು.