2021-22 ಸಾಲಿನ ಪ್ರಥಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳ ಸ್ವಾಗತ ಮತ್ತು ವೈಟ್ಕೋಟ್ ಪ್ರದಾನ ಕಾರ್ಯಕ್ರಮ ಎ.13ರಂದು ಕೆ.ವಿ.ಜಿ. ಮೆಡಿಕಲ್ಕಾಲೇಜ್ ಮತ್ತುಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವು ಪ್ರತೀಕ್ಷಾ ಕಾಮತ್, ವೈಷ್ಣವಿ, ಕ್ಷಮಾರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಸತ್ಯವತಿ ಆರ್. ಆಳ್ವ ಸ್ವಾಗತಿಸಿ,ಎನಾಟಮಿ ವಿಭಾಗದ ಮುಖ್ಯಸ್ಥರಾದ ಡಾ. ವಿದ್ಯಾಶಾಂಭವ ಪಾರೆ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ಸಂಸ್ಥೆಯ ಡೀನ್ಡಾ. ನೀಲಾಂಬಿಕೈ ನಟರಾಜನ್ ವಿದ್ಯಾರ್ಥಿಗಳಿಗೆ ಶಿಸ್ತಿನ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಯಾಗಿ ಗಿರೀಶ್ ನಂದನ್, ಸಹಾಯಕ ಆಯುಕ್ತರು ಪುತ್ತೂರು ಇವರು ಭಾಗವಹಿಸಿದ್ದರು. ಡಾ. ಕೆ.ವಿ. ಚಿದಾನಂದ, ಅಧ್ಯಕ್ಷರು ಎ.ಒ.ಎಲ್.ಇ ಸುಳ್ಯ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಡಾ. ಪ್ರೀತಿರಾಜ್ ಬಲ್ಲಾಳ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಪ್ರಧಾನ ಕಾರ್ಯದರ್ಶಿಗಳಾದ ಅಕ್ಷಯ್ ಕೆ.ಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಶ್ರೀಮತಿ ಶೋಭಾಚಿದಾನಂದ, ಸದಸ್ಯರುಎ.ಒ.ಎಲ್.ಇ, ಡಾ. ಗೋಪಿನಾಥ್ ಪೈ, ವೈದ್ಯಕೀಯ ಅಧೀಕ್ಷಕರು, ಡಾ. ಶೀಲಾ ಜಿ. ನಾಯಕ್, ನಿವೃತ್ತ ಪ್ರಾಂಶುಪಾಲರು,ಡಾ. ಗೀತಾ ಜೆ. ದೊಪ್ಪ, ವಿದ್ಯಾರ್ಥಿನಿಯರ ವಸತಿ ನಿಲಯಗಳ ಮುಖ್ಯಅಧೀಕ್ಷಕಿ ಹಾಗೂ ಸಿಬ್ಬಂದಿ ವರ್ಗದವರುಮತ್ತು ಪೋಷಕರು ಉಪಸ್ಥಿತರಿದ್ದರು. ಕು.ಕಾರ್ತಿಕಾ ಮತ್ತುಕು.ರೇಶ್ಮಾಕಾರ್ಯಕ್ರಮನಿರೂಪಿಸಿ, ಡಾ.ಶಿವರಾಜ್ ಶಂಕರ್ ವೈ.ಎಂ. ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.