ಅಜ್ಜಾವರ ಸ್ತ್ರೀ ಶಕ್ತಿ ಶ್ರೀನಿಧಿ ಗೊಂಚಲು ಮಹಾಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅಜ್ಜಾವರ ಗ್ರಾಮದ ಸ್ತ್ರೀಶಕ್ತಿ ಸಂಘಗಳ ಮಹಿಳೆಯರ ಮಹಾಸಭೆ ಮತ್ತು ವಾರ್ಷಿಕೋತ್ಸವವ ಎ.12ರಂದು ಮೇನಾಲ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.

 


ಮಹಾಸಭೆ ಅಧ್ಯಕ್ಷತೆಯನ್ನು ಗೊಂಚಲಿನ ಅಧ್ಯಕ್ಷೆ ಶ್ರೀಮತಿ ರೇವತಿ ವಹಿಸಿದ್ದರು. ಕಾರ್ಯದರ್ಶಿ ಗೀತಾ ಅಡ್ಪಂಗಾಯ ವರದಿ ವಾಚಿಸಿದರು. ಕೋಶಾಧಿಕಾರಿ ಯಶೋಧ ಮೇನಾಲ ಲೆಕ್ಕಪತ್ರ ಮಂಡಿಸಿದರು. ಸುಳ್ಯ ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಶೈಲಜಾರವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಗಿರಿಜ ಮುಳ್ಯ ಹಾಗೂ ಕಾರ್ಯದರ್ಶಿಯಾಗಿ ಯಶೋಧ ಮೇನಾಲ,‌ ಕೋಶಾಧಿಕಾರಿಯಾಗಿ ಅನಿತಾ ಅಡ್ಪಂಗಾಯ ಆಯ್ಕೆಯಾದರು.
ಮಹಾಸಭೆಯ ನಂತರ ನಡೆದ ಗೊಂಚಲಿನ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಅಜ್ಜಾವರ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾ ಮನಮೋಹನ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸಿಡಿಪಿಒ ರಶ್ಮಿ ಅಶೋಕ್ ನೆಕ್ರಾಜೆ, ಹಾಗೂ ಗೊಂಚಲಿನ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮದಲ್ಲಿ ಛದ್ಮವೇಷ, ಭಕ್ತಿಗೀತೆ, ಜನಪದ ಗೀತೆ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೊಂಚಲಿನ ಸದಸ್ಯೆಯರಿಂದ ಸಾಂಸ್ಕ್ರತಿಕ ಕಾರ್ಯಕ್ರಮವು ನಡೆಯಿತು. ಸವಿತಾ ದೊಡ್ಡೇರಿ ಹಾಗೂ ಸಾವಿತ್ರ ಅಜ್ಜಾವರ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.