ಮೇದಿನಡ್ಕ ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಎ.15 ರಿಂದ ಎ.17ರವರೆಗೆ ನಡೆಯಿತು.
ಎ.15ರಂದು ಬೆಳಗ್ಗೆ ಶ್ರೀ ಗಣಪತಿ ಹೋಮ, ಧ್ವಜಾರೋಹಣ. ಬಳಿಕ ನಾಗತಂಬಿಲ, ಮಧ್ಯಾಹ್ನ ಮಂಗಳಾರತಿ, ಪ್ರಸಾದ ವಿತರಣೆ. ಸಂಜೆ ಶ್ರೀ ದುರ್ಗಾಪೂಜೆ, ಬಳಿಕ ದೇವತಾ ದರ್ಶನ, ಪ್ರಶ್ನೆ, ಶ್ರೀ ದೇವಿಯ ಕರಗಂ ಪ್ರತಿಷ್ಠೆ ನಡೆಯಿತು.


ಎ.16ರಂದು ಶ್ರೀ ದೇವಿಗೆ ಮಹಾಮಂಗಳಾರತಿ, ಹಾಲು ಕುಂಭ ಮೆರವಣಿಗೆ, ಮಧ್ಯಾಹ್ನ ಮಹಾಪೂಜೆ, ಅಗ್ನಿ ಕುಂಡಕ್ಕೆ ಅಗ್ನಿ ಸ್ಪರ್ಶ, ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ. ಅಪರಾಹ್ನ ಶ್ರೀ ದೇವಿಯ ಬೃಹತ್ ಕರಗಂ ಮೆರವಣಿಗೆ, ರಾತ್ರಿ ಮಹಾ ಮಂಗಳಾರತಿ, ಅನ್ನಸಂತರ್ಪಣೆ, ಮಹಾವಿಳಕ್ಕು ಮೆರವಣಿಗೆ, ಶ್ರೀ ದೇವಿಯ ದರ್ಶನಕ್ಕೆ ಹೊರಟಿತು. ರಾತ್ರಿ ಅಗ್ನಿಸೇವೆ, ಬಳಿಕ ಮಹಾಪೂಜೆ ನಡೆಯಿತು.

ಎ.17ರಂದು ಬೆಳಗ್ಗೆ ಶ್ರೀ ದೇವಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆಯಾಯಿತು. ಬಳಿಕ ಕಾವಲು ಪರಿವಾರ ದೈವಗಳಿಗೆ ಪೂಜೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ದೇವಿಗೆ ಅರಶಿನ ಜಳಕ ಸೇವೆಯೊಂದಿಗೆ ಬೃಹತ್ ಕರಗಂ ವಿಸರ್ಜನಾ ಮೆರವಣಿಗೆ. ನಡೆದ ಬಳಿಕ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.