ಕನಕಮಜಲಿನ ಕನಕಕಲಾ ಗ್ರಾಮ ಬಾಲನಿಲಯ ಮೂರ್ಜೆಯಲ್ಲಿ ನಡೆದ ಐದು ದಿನಗಳ ಪ್ರಕೃತಿಕಲಾ ವಿಹಾರ ಬೇಸಿಗೆ ಕಲಾ ಶಿಬಿರವು ಎ.16ರಂದು ಸಮಾರೋಪಗೊಂಡಿತು.
ಮೂರ್ಜೆ ನಂದರವಂಶ ಗೌಡ ತರವಾಡು ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಗೋಪಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಕಲಾಪೋಷಕಿ ಶ್ರೀಮತಿ ಯೋಗಿತಾ ಗೋಪಿನಾಥ್, ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ನೆಡಿಲು ಉಪಸ್ಥಿತರಿದ್ದರು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು ಕಾರ್ಯಕ್ರಮ ನಿರ್ವಹಿಸಿದರು. ಮೈಸೂರು – ಮಂಡ್ಯ ಗುರುದೇವ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕಿ, ನಾಟ್ಯವಿದುಷಿ ಶ್ರೀಮತಿ ಚೇತನಾ ರಾಧಾಕೃಷ್ಣ ಪಿ.ಯಂ. ಉಪಸ್ಥಿತರಿದ್ದರು.
ಪೆರ್ನಾಜೆ ಶ್ರೀ ಸೀತಾರಾಘವ ಪ.ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಆರ್. ಗೋಪಾಲಕೃಷ್ಣ, ಯೋಗ ತರಬೇತುದಾರ ಚಂದ್ರಶೇಖರ ಕುದ್ಕುಳಿ, ಯೋಗಪಟು ವಿಜಯಕುಮಾರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು. ಗುರುದೇವ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಮೂರ್ಜೆ ಸ್ವಾಗತಿಸಿದರು.