ಗೌಡ ಸಮಾಜದವರಿಂದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರಿಗೆ ಸನ್ಮಾನ
ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು ಏ. 16ರಂದು ಕೊಡಗಿನ ಭಾಗಮಂಡಲ ಗೌಡ ಸಮಾಜಕ್ಕೆ ಭೇಟಿ ನೀಡಿದರು. 95%ಕ್ಕಿಂತ ಹೆಚ್ಚು ಗೌಡ ಸಮುದಾಯದವರು ವಾಸ್ತವ್ಯವಿರುವ ಈ ಪ್ರದೇಶದಲ್ಲಿ ನೂತನ ಗೌಡ ಸಮುದಾಯಭವನವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಆರಂಭಗೊಂಡಿರುವ ಕಾಮಗಾರಿಯನ್ನು ವೀಕ್ಷಿಸುವುದ್ದಕ್ಕಾಗಿ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು ಭೇಟಿಕೊಟ್ಟಿದ್ದರು.
ಈ ಸಂಧರ್ಭದಲ್ಲಿ ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷರಾದ ಸತೀಶ್ಜೋಯಪ್ಪರವರು, ಉಪಾಧ್ಯಕ್ಷರಾದ ನಿಡ್ಯಮಲೆ ದಾಮೋದರ, ಕಾರ್ಯದರ್ಶಿ ರವಿ ನಿಡ್ಯಮಲೆ, ನಿರ್ದೇಶಕರುಗಳಾದ ಹೂಸೂರು ಸತೀಶ್ಕುಮಾರ್, ಕೆದಂಬಾಡಿ ರಮೇಶ್, ಅಮೆಮನೆ ಹರೀಶ್, ಕುದ್ಪಾಜೆ ಪ್ರಕಾಶ್ ಮತ್ತು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರೊಂದಿಗೆ ಕೆವಿಜಿ ಇಂಜಿನಿಯರಿಂಗ್ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಯು.ಜೆ, ಭಾಗಮಂಡಲ ಐ.ಟಿ.ಐ ಪ್ರಾಂಶುಪಾಲರಾದ ಶ್ರೀಕಾಂತ್ ಕುಡೆಕಲ್ಲು, ಕಿರಿಯ ತರಬೇತಿ ಅಧಿಕಾರಿ ವೇಣುಗೋಪಾಲ, ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಭವಾನಿಶಂಕರಅಡ್ತಲೆ, ಎ.ಓ.ಎಲ್.ಇ ಇದರ ಆಡಳಿತಾಧಿಕಾರಿಗಳಾದ ಪ್ರಸನ್ನ ಕಲ್ಲಾಜೆ, ಕೆವಿಜಿ ಪಾಲಿಟೆಕ್ನಿಕ್ಕ್ ನ ಸಿಬ್ಬಂದಿ ಅರುಣ್ಕುರುಂಜಿ ಉಪಸ್ಥಿತರಿದ್ದರು.
ಭಾಗಮಂಡಲ ಗೌಡ ಸಮಾಜದ ಸತೀಶ್ ಜೋಯಪ್ಪ ಮತ್ತು ಪದಾಧಿಕಾರಿಗಳು ಡಾ. ರೇಣುಕಾ ಪ್ರಸಾದ್ರವರನ್ನು ಸನ್ಮಾನಿಸಿ, ಭಾಗಮಂಡಲದ ಪ್ರದೇಶದಲ್ಲಿ ಬಹು ಸಂಖ್ಯಾತರಾಗಿರುವ ಗೌಡ ಸಮಾಜಕ್ಕೆ ಈ ಹಿಂದೆ ಪೂಜ್ಯರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರು ನಿರ್ಮಾಣ ಮಾಡಿರುವ ಹಳೆಯ ಸಮುದಾಯ ಭವನವಿತ್ತು. ಅವರ ಆಶಿರ್ವಾದದಿಂದ ನಮ್ಮೆಲ್ಲಾ ಸಮಾಜ ಬಾಂದವರು ಇಲ್ಲಿವರೆಗೆ ಆ ಕಟ್ಟಡದಲ್ಲಿಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಅದು ಶಿಥಿಲಗೊಂಡಿರುವುದರಿಂದ ನೂತನ ಸುಸಜ್ಜಿತ ಕಟ್ಟಡವನ್ನುಆಧುನಿಕ ವಿನ್ಯಾಸದೊಂದಿಗೆ ನಿರ್ಮಾಣ ಮಾಡುವಲ್ಲಿ ಯೋಜನೆ ರೂಪಿಸಿಕೊಂಡಿರುತ್ತೇವೆ. ಹಾಗಾಗಿ ಪೂಜ್ಯರನ್ನು ಅನುಸರಿಸಿಕೊಂಡು ಬಂದಿರುವ ಅಕಾಡೆಮಿ ಪ್ರಧಾನಕಾರ್ಯದರ್ಶಿಗಳು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ನಮಗೆ ಸಂಪೂರ್ಣ ಸಹಕಾರ ನೀಡಬೇಕು. ತಮ್ಮತಂದೆಯವರಂತೆ ತಾವು ಸಹಕಾರ ನೀಡಿದಲ್ಲಿಅತ್ಯಂತ ಸುಸಜ್ಜಿತವಾಗಿ ಮೂರು ಮಹಡಿಗಳ ಕಟ್ಟಡವನ್ನುಅತೀ ಶೀಘ್ರವಾಗಿ ನಿರ್ಮಾಣ ಮಾಡಿ ಈ ಸಮಾಜಕ್ಕೆ ನೀಡುತ್ತೇವೆ ಎಂದು ಮನವಿ ಮಾಡಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದಡಾ. ರೇಣುಕಾ ಪ್ರಸಾದ್ರವರು ಪುಣ್ಯಕ್ಷೇತ್ರವಾದ ಈ ಪ್ರದೇಶದಲ್ಲಿ ನಮ್ಮ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಹೆಮ್ಮೆಯ ವಿಚಾರ. ನಮ್ಮತಂದೆಯವರ ದೂರದರ್ಶಿತ್ವದ ಫಲವಾಗಿ ಈ ಭಾಗದಲ್ಲಿ ಕೂಡ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ಕಟ್ಟಡವನ್ನು ಕೂಡ ನಿರ್ಮಾಣಮಾಡಿದ್ದೇವೆ. ಇದಕ್ಕೆ ವಿರಾಜಪೇಟೆ ತಾಲೂಕಿನ ಶಾಸಕರಾದ ಮಾನ್ಯ ಭೋಪಯ್ಯನವರ ಕ್ಷೇತ್ರವಾದುದರಿಂದ ಅವರ ಪ್ರೇರಣೆ ಇದೆ ಎಂದು ನೆನಪಿಸಿಕೊಂಡರು. ಈ ಊರು ನನ್ನ ತಾಯಿಯ ಊರು ಆದ ಕಾರಣ ನಾನು ಈ ಭಾಗದ ಸಮುದಾಯದವರನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ನೂತನ ಕಟ್ಟಡ ನಿರ್ಮಾಣಮಾಡಿ ನಿಮ್ಮ ಕಾರ್ಯಕ್ಕೆ ನನ್ನ ಸಹಾಯ ಸದಾ ಇರುತ್ತದೆ. ಅಲ್ಲದೆ ನಿಮ್ಮಲ್ಲಾ ಯೋಜಿತ ಕಾರ್ಯಕ್ರಮಗಳಿಗೆ ಸಹಕಾರ ಪ್ರೋತ್ಸಾಹ ಹಾಗೂ ಬೆಂಬಲ ಇರುತ್ತದೆ ಇದರೊಂದಿಗೆ ನಮ್ಮಲ್ಲಾ ಕುಲ ಭಾಂದವರ ಬೆಂಬಲ ಕೂಡ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅತೀ ಶೀಘ್ರವಾಗಿ ತಮ್ಮಯೋಜಿತ ಕಟ್ಟಡ ನಿರ್ಮಾಣವಾಗಲಿ ಎಂಬುದಾಗಿ ಶುಭಹಾರೈಸಿದರು.