ಎಣ್ಮೂರು : ಶ್ರೀ ಆದಿ ನಾಗ ಬ್ರಹ್ಮ ಕೋಟಿ ಚೆನ್ನಯ್ಯ ಗರಡಿಯಲ್ಲಿ ವರ್ಷಂಪ್ರತಿ ನಡೆಯುವಂತೆ ಎ.15ರಂದು ವಿಷು ವಿಶೇಷ ಕಾರ್ಯಕ್ರಮ ನಡೆಯಿತು. ಭಕ್ತಾದಿಗಳು ನೀಡಿದ ಹಸಿರು ಕಾಣಿಕೆ, ವಿಷು ಕಣಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಯಿತು.
ವಿಶೇಷ ಮಹಾಪೂಜೆ ಸೇವೆ, ತಂಬಿಲ, ದರ್ಶನ ಸೇವೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ದ.ಕ.ಜಿಲ್ಲೆ, ಉಡುಪಿ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು. ಹಲವರನ್ನು ಗುರುತಿಸಿ ಗೌರವಿಸಿ ಪ್ರಸಾದ ನೀಡಲಾಯಿತು. ಈ ಸಂದರ್ಭದಲ್ಲಿ ಕಟ್ಟಬೀಡು ಕುಟುಂಬಸ್ಥರು, ಅನುವಂಶಿಕ ಆಡಳ್ತೆದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಸ್ಥಳೀಯರು ಉಪಸ್ಥಿತರಿದ್ದರು.
ವರದಿ : ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ