ತೊಡಿಕಾನ : ಸತ್ತಿದ್ದ ಮೀನುಗಳನ್ನು ತೆಗೆಯಲೆಂದು ಸತ್ಯಪಾಲದ ನೀರಿಗಿಳಿದ ತಂದೆ ಮಗನಿಗೆ ವಿದ್ಯುತ್ ಶಾಕ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ತೊಡಿಕಾನ ದೇವಸ್ಥಾನದ ಸತ್ಯಪಾಲದ ಕೊಳದಲ್ಲಿ ಮೀನು  ಸತ್ತು ಬಿದ್ದಿರುವುದನ್ನು ಕಂಡು ಅದನ್ನು ತೆಗೆಯಲೆಂದು ಕೊಳಕ್ಕಿಳಿದ ತಂದೆ ಮಗ ವಿದ್ಯುತ್ ಶಾಕ್ ಗೆ ಒಳಗಾದ ಘಟನೆ ವರದಿಯಾಗಿದೆ.


ಎ.17 ರಂದು ಸಂಜೆ 5.30 ರ ವೇಳೆಗೆ ಸತ್ಯಪಾಲದ ಬಳಿಯಿಂದ ಹಾದು ಹೋಗುತ್ತಿದ್ದ ದೊಡ್ಡಡ್ಕದ ನಿತಿನ್ ಎಂಬ ಯುವಕನಿಗೆ ಸತ್ಯಪಾಲದ ಕೊಳದಲ್ಲಿದ್ದ ಬಣ್ಣದ ಮೀನುಗಳು ಸತ್ತು ತೇಲುತ್ತಿರುವುದು ಕಂಡು ಬಂತು. ಅದನ್ನು ತೆಗೆಯಲೆಂದು ಆತ ನೀರಿಗಳಿದಾಗ ವಿದ್ಯತ್ ಶಾಕ್ ಹೊಡೆದು ಮುಗ್ಗರಿಸಿ ಬಿದ್ದನೆನ್ನಲಾಗಿದೆ. ಇದನ್ನು ಕಂಡ ಆತನ ತಂದೆ ದಿವಾಕರರು ಮಗನನ್ನು ಮೇಲಕ್ಕೆತ್ತಲೆಂದು ನೀರಿಗಿಳಿದಾಗ ಅವರೂ ವಿದ್ಯುತ್ ಶಾಕ್ ಗೊಳಗಾದರು. ಇದನ್ನು ಕಂಡು ಸಮೀಪದಲ್ಲಿದ್ದವರು ಓಡಿಬಂದು ಅವರನ್ನು ರಕ್ಷಿಸಿದರೆಂದು ತಿಳಿದುಬಂದಿದೆ.
ಶಾಕ್ ಗೊಳಗಾಗಿದ್ದ ಅವರನ್ನು ದೇವಳದ ಕಮಿಟಿಯವರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.