ಮರ್ಕಂಜ ಗ್ರಾಮ ಕುದ್ಪಾಜೆ ಮನೆಯ ರಾಧಾಕೃಷ್ಣ ಹಾಗೂ ನಶ್ಮಿತ ದಂಪತಿಯ ಪುತ್ರಿ ನಾಲ್ಕು ವರ್ಷದ ಪುಟಾಣಿ ಪ್ರಣನ್ಯ ಕೆ.ಆರ್. ಝೀ ಟಿ.ವಿ.ಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಆಯ್ಕೆಯಾಗಿದ್ದಾಳೆ.
ಎ.16 ಹಾಗೂ ಎ.17 ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮುಂದಿನ ವಾರ ಎ.23 ಹಾಗೂ 24 ರಂದು ಪ್ರಸಾರವಾಗುವ ವೀಕೆಂಡ್ ಕಾರ್ಯಕ್ರಮದಲ್ಲಿ ಈಕೆ ನೃತ್ಯ ಪ್ರದರ್ಶನ ಮಾಡಲಿದ್ದಾಳೆ.
ಈಕೆ ಮಂಗಳೂರಿನ ಚಿಗುರು ಟೀಮ್ನ ಸಂತೋಷ್ ಮಾಸ್ಟರ್ರವರೊಂದಿಗೆ ಡ್ಯಾನ್ಸ್ ಕಲಿಯುತ್ತಿದ್ದಾಳೆ. ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಪ್ರೀಕೆಜಿ ತರಗತಿ ಕಲಿಯುತ್ತಿರುವ ಪ್ರಣನ್ಯ ಈ ಹಿಂದೆ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಕೃಷ್ಣವೇಷ ಸ್ಪರ್ಧೆ ಪ್ರಥಮ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಮಟ್ಟದ ಮುದ್ದು ಕೃಷ್ಣ ಸ್ಪರ್ಧೆ ದ್ವಿತೀಯ, ಪೊಸಿಟ್ಯೂವ್ ಫ್ರೊಡೆಕ್ಷನ್ ಅಯೋಜಿಸಿದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ದ್ವಿತೀಯ, ಕರ್ನಾಟಕ ರಾಜ್ಯ ಡ್ಯಾನ್ಸ್ ಸ್ಟೋಟ್ಸ್ ಚಾಂಪಿಯನ್ ಮಡಿಕೇರಿ 2021 ಡ್ಯಾನ್ಸ್ ಸ್ಪರ್ಧೆಯಲ್ಲಿ ದ್ವಿತೀಯ, ಮಕ್ಕಳ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಸ್ಪೇಷಲ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಉಡುಪಿ ಪ್ರಥಮ, ಮರುಕ್ಯೂರಿ ಡಾನ್ಸ್ ಕ್ರೇವ್ ಬೆಳಂಪಳ್ಳಿ ಉಡುಪಿ ರಾಜ್ಯ ಮಟ್ಟದ ಡ್ಯಾನ್ಸ್ನಲ್ಲಿ ಪ್ರಥಮ, ರಾರಾಸಂ ಪೌಂಡೇಶನ್ (ರಿ) ಬಂಟ್ವಾಳ ಅಯೋಜಿಸಿದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ, ಸೂಪರ್ ಕಿಡ್ಸ್ ಚಾನೆಲ್ ಡಿ ಬಾಸ್ ಬೆಂಗಳೂರು ಇವರು ಅಯೋಜಿಸಿದ ರಾಜ್ಯ ಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ, ಕಣ್ಣೂರು ಬಾಯ್ಸ್ ಅಕಾಡೆಮಿ ಮಂಗಳೂರು-2022 ಇವರ ಅಯೋಜಿಸಿದ ರಾಜ್ಯ ಮಟ್ಟದ ಡ್ಯಾನ್ಸ್ ವಾರ್ನಲ್ಲಿ ದ್ವಿತೀಯ, ಪರಿವರ್ತನ ಸೆಂಟರ್ ಕಾಪು 2022 ಇವರು ಅಯೋಜಿಸಿದ ಡ್ಯಾನ್ಸ್ ಪ್ರಥಮ, ನಮ್ಮ ಕುಡ್ಲ ರಿಯಾಲಿಟಿ ಶೋನಲ್ಲಿ ಫೈನಲ್ ಹಂತಕ್ಕೆ ಬಂದಿರುತ್ತಾರೆ, ಡ್ಯಾನ್ ಬೇಬಿ ಡ್ಯಾನ್ಸ್ ವಿ೪ ನ್ಯೂಸ್ ಕರ್ನಾಟಕ ಮಂಗಳೂರು ಇವರು ಅಯೋಜಿಸಿದ ರಿಯಾಲಿಟಿ ಶೋಗೆ ಆಯ್ಕೆಯಾಗಿರುತ್ತಾರೆ, ಕಲರ್ಸ್ ಡ್ಯಾನ್ಸ್ ದಿವಾನೆ ಜ್ಯೂನಿಯರ್ಸ್ ಮುಂಬೈ ಇವರು ಅಯೋಜಿಸಿದ ರಿಯಾಲಿಟಿ ಶೋದಲ್ಲಿ ಭಾಗವಹಿಸಿರುತ್ತಾರೆ.